ದೇಶದಲ್ಲಿ ಕೋವಿಡ್ ಎರಡನೇ ಅಲೆಗೆ ಚುನಾವಣಾ ಆಯೋಗವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ: ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಉಂಟಾಗಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಮೇ ಎರಡರಂದು ತಮಿಳುನಾಡಿನ ಕರೂರು ಲೋಕಸಭಾ ಚುನಾವಣೆಯ ಮತ ಎಣಿಕೆಯ ಸಮಯದಲ್ಲಿ ಕೈಗೊಳ್ಳಲಾಗುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುವ ವೇಳೆ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೋವಿಡ್ ವ್ಯಾಪಕವಾಗಿರುವ ಸಮಯದಲ್ಲಿ ಚುನಾವಣೆ ನಡೆಸಬಾರದೆಂದು ನ್ಯಾಯಾಲಯದ ಸೂಚನೆಯಿದ್ದರೂ ಕೂಡಾ ಅದನ್ನು ನಿರ್ಲಕ್ಷಿಸಿದ್ದೀರಿ. ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಪಾಲಿಸದೇ ಚುನಾವಣಾ ರ‍್ಯಾಲಿಗಳು ನಡೆಯುವಾಗ ನೀವೇನು ಅನ್ಯಗ್ರಹಕ್ಕೆ ಹೋಗಿದ್ದೀರಾ? ಎಂದು ಪ್ರಶ್ನಿಸಿದೆ.

ಯಾವುದೇ ಕ್ರಮ ಕೈಗೊಳ್ಳದಿರುವ ನಿಮ್ಮ ವಿರುದ್ಧ ಕೊಲೆ ಆರೋಪ ಹೊರಿಸಿ ಮೊಕದ್ದಮೆ ಹೂಡಿದರೂ ತಪ್ಪಾಗುವುದಿಲ್ಲ ಎಂದು ಮುಖ್ಯ ನ್ಯಾಯಾಧೀಶ ಸಂಬಿತ್ ಬ್ಯಾನರ್ಜಿ ನೇತೃತ್ವದ ನ್ಯಾಯಪೀಠವು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಖಾರವಾಗಿ ತಾಕೀತು ಮಾಡಿದೆ.

ಮತ ಎಣಿಕೆಯ ಸಮಯದಲ್ಲಿ ಕೈಗೊಳ್ಳಬೇಕಾಗಿರುವ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತ ವಿವರಣೆಯನ್ನು ಎಪ್ರಿಲ್ 30 ರೊಳಗೆ ನ್ಯಾಯಾಲಯದ ಮುಂದಿಡಬೇಕೆಂದು ಆದೇಶಿಸಿ, ಮುಂದಿನ ವಿಚಾರಣೆಯನ್ನು ಎಪ್ರಿಲ್ 20 ಕ್ಕೆ ಮುಂದೂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು