ಕೋವಿಡ್ ಗೆದ್ದು, ಮತ್ತೆ ಜೈಲು ಕೋಣೆಗೆ ಸ್ಥಳಾಂತರಗೊಂಡ ಜೆಎನ್‍ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ತಗುಲಿ ಚಿಕಿತ್ಸೆಯಲ್ಲಿದ್ದ ಜೆಎನ್‍ಯುವಿನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರೋಗ ಮುಕ್ತರಾಗಿದ್ದಾರೆ. ಇದೀಗ ಅವರನ್ನು ಮತ್ತೆ ಜೈಲು ಕೋಣೆಗೆ ಸ್ಥಳಾಂತರಿಸಲಾಗಿದೆ.

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸಂಚು ಹೂಡಿದ್ದಾರೆಂದು ಆರೋಪ ಹೊತ್ತುಕೊಂಡು ಜೈಲು ಪಾಲಾಗಿದ್ದ ಉಮರ್ ಖಾಲಿದಿಗೆ ವಾರಗಳ ಹಿಂದೆ ಕೋವಿಡ್ ತಗುಲಿತ್ತು. ಹಿನ್ನೆಲೆಯಲ್ಲಿ ಜೈಲು ಆವರಣದೊಳಗಿದ್ದ ಪ್ರತ್ಯೇಕ ನಿರೀಕ್ಷಣಾ ಕೊಠಡಿಗೆ ವರ್ಗಾಯಿಸಲಾಗಿತ್ತು. ವೈದ್ಯಕೀಯ  ಚಿಕಿತ್ಸೆ ಪಡೆದ ಅವರು, ಕೋವಿಡ್ ನಿಂದ ಮುಕ್ತರಾಗಿ ಮತ್ತೆ ಜೈಲು ಕೋಣೆಗೆ ಸ್ಥಳಾಂತರಗೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿವಿಧ ಕೇಸುಗಳನ್ವಯ ಬಂಧಿತರಾಗಿದ್ದ ಉಮರ್ ವಿರುದ್ಧವಾಗಿ ಯುಎಪಿಎ ಕಾಯ್ದೆಯನ್ವಯೂ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ಜಾಮೀನು ದೊರೆಯದೇ ಯುವ ವಿದ್ಯಾರ್ಥಿ ನಾಯಕ ಜೈಲಿನಲ್ಲೇ ಕೊಳೆಯುವಂತಾಗಿದೆ.

(ದುಷ್ಕರ್ಮಿಗಳ ಗುಂಪು ಮನೆಗೆ ದಾಳಿ ಮಾಡಿದಾಗ ತಪ್ಪಿಸಿಕೊಂಡು ಓಡಿದ ಮುಹಮ್ಮದ್ ಜಾವಿದ್ ಮತ್ತು ಸನಾ ದಂಪತಿಗಳು ತಿಂಗಳುಗಳ ಬಳಿಕ ಮನೆಗೆ ಹಿಂದಿರುಗಿದ ವೇಳೆ. ಚಿತ್ರಕೃಪೆ : ಇಂಡಿಯನ್ ಎಕ್ಸ್ ಪ್ರೆಸ್)

 

ಕಳೆದ ವರ್ಷ ಫೆಬ್ರವರಿ ಇಪ್ಪತ್ತನಾಲ್ಕರಂದು ಸಿಎಎ ವಿರೋಧಿಗಳು ಮತ್ತು ಬೆಂಬಲಿಗರ ನಡುವೆ ನಡೆದ ಸಂಘರ್ಷವು ರಾಜ್ಯವು ಕಂಡರಿಯದ ಗಲಭೆಗೆ ತಿರುಗಿತ್ತು. ಗಲಭೆಯಲ್ಲಿ ಒಟ್ಟು 53 ಜನರು ಮೃತ ಪಟ್ಟಿದ್ದು, 580 ಜನರು ಗಾಯಗೊಂಡಿದ್ದರು. ಗಲಭೆಗೆ ಸಂಬಂಧಿಸಿದಂತೆ ಹಲವಾರು ಜನರ ಬಂಧನವೂ ನಡೆದಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು