ಕೋವಿಡ್ ಎರಡನೇ ಅಲೆಗೆ ನಡುಗಿತು ಭಾರತ ಒಕ್ಕೂಟ ರಾಜಧಾನಿ | ದೆಹಲಿಯಲ್ಲಿ ಪ್ರತಿ ಗಂಟೆಗೆ ಹತ್ತು ಜನರಂತೆ ಸಾವಿಗೀಡಾಗುತ್ತಿದ್ದಾರೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆಯು ವಿರಾಟ್ ರೂಪವನ್ನು ಪ್ರದರ್ಶಿಸುತ್ತಿದೆ. ಒಕ್ಕೂಟ ರಾಜಧಾನಿಯಾದ ದೆಹಲಿಯ ಪರಿಸ್ಥಿತಿಯು ಇದಕ್ಕೊಂದು ಪ್ರತ್ಯಕ್ಷ ಸಾಕ್ಷಿಯಾಗಿ ಬಿಟ್ಟಿದೆ.

ದೆಹಲಿಯ ನೂತನ ಅಂಕಿ ಅಂಶಗಳು ಆತಂಕಕ್ಕೀಡಾಗಿಸುತ್ತಿದೆ. ನಿನ್ನೆ ಒಂದೇ ದಿನ 240 ಸಾವುಗಳು ವರದಿಯಾಗಿದೆ. ಕಳೆದ ವರ್ಷ ದೇಶದಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣವು ವರದಿಯಾದ ಬಳಿಕ ಇಷ್ಟೊಂದು ಪ್ರಮಾಣ ಮರಣವು ವರದಿಯಾಗಿರುವುದು ಇದೇ ಮೊದಲ ಸಲ. ದೆಹಲಿಯ ಈಗಿನ ಮರಣ ಪ್ರಮಾಣವು 26.12 ಪ್ರತಿಶತಕ್ಕೆ ಏರಿಕೆಯಾಗಿದೆ.

23686 ಹೊಸ ಕೋವಿಡ್ ಪ್ರಕರಣಗಳು ನಿನ್ನೆ ಒಂದೇ ದಿನದಲ್ಲಿ ವರದಿಯಾಗಿದ್ದು, ಕಳೆದ ಐದು ದಿನಗಳಲ್ಲಿ ಕೇವಲ ದೆಹಲಿ ನಗರದಲ್ಲಷ್ಟೇ ಮರಣ ಹೊಂದಿದವರ ಸಂಖ್ಯೆ 823.

ನಿನ್ನೆಯ ದಿನ 68778 ಆರ್ ಟಿಪಿಸಿಆರ್ ಪರೀಕ್ಷೆ ಹಾಗೂ 21918 ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳೂ ಸೇರಿ, ಒಟ್ಟು 90696 ಪರೀಕ್ಷೆಗಳನ್ನು ನಡೆಸಿರುವುದಾಗಿ ದೆಹಲಿ ಸರಕಾರ ಹೇಳಿ ಕೊಂಡಿದೆ. ವರೆಗೆ ಕೋವಿಡ್ ನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 7.87 ಲಕ್ಷಗಳಾಗಿದ್ದು, ಸದ್ಯ ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆ 76,887 ಕ್ಕೆ ಏರಿಕೆಯಾಗಿದೆ.

ಎರಡನೇ ಅಲೆಯಲ್ಲಿ ಕಂಡು ಬಂದಿರುವ ರೂಪಾಂತರಿತ ವೈರಸ್ ಅಪಾಯಕಾರಿ:

ಕೋವಿಡ್ ಎರಡನೇಯ ಅಲೆಯಲ್ಲಿ ಕಂಡು ಬಂದಿರುವ ರೂಪಾಂತರಿತ ವೈರಸ್, ಮತ್ತಷ್ಟು ತೀವ್ರವಾಗಿ ರೋಗ ಹರಡಲು ಕಾರಣವಾಗಿದೆಯೆಂದು ತಜ್ಞರು ತಿಳಿಸಿದ್ದಾರೆ. ಪರಿಣಾಮವಾಗಿ ದೆಹಲಿಯಾದ್ಯಂತ ಆಸ್ಪತ್ರೆಗಳಲ್ಲಿ ಹಾಸಿಗೆಲಸಿಕೆ ಮತ್ತು ಅಂಬ್ಯುಲೆನ್ಸ್ ಗಳ ತೀವ್ರ ಕೊರತೆ ಕಾಡುತ್ತಿದೆಯೆಂದು ವರದಿಯಾಗಿದೆ.

ರೂಪಾಂತರಿತ ವೈರಸ್ಸುಗಳು ಹೃದಯವನ್ನು ಬಾಧಿಸುತ್ತವೆಯೆಂದೂ, ತೀವ್ರ ಉಸಿರಾಟದ ತೊಂದರೆಯನ್ನೂ ತರುತ್ತದೆಯೆಂದೂ ತಜ್ಞರು ವಿವರಿಸುತ್ತಾರೆ.  ರೂಪಾಂತರಿತ ವೈರಸ್ಸುಗಳ ತೀವ್ರ ಹರಡುವಿಕೆಯಿಂದಾಗಿ ಆಸ್ಪತ್ರೆಗಳು ತುಂಬಿದೆಯಲ್ಲದೇ, ಮರಣ ಸಂಖ್ಯೆಯಲ್ಲೂ ತೀವ್ರ ಹೆಚ್ಚಳ ಕಂಡು ಬಂದಿದೆ.


ದೆಹಲಿಯ
ಸ್ಮಶಾನಗಳ ಹೊರಗೆ ಮೃತದೇಹದ ವಾರೀಸುದಾರರು ಗಂಟೆ ಗಟ್ಟಳೆ ಕಾಯುವ ದೃಶ್ಯಗಳು ಕಂಡು ಬರುತ್ತಿದ್ದು, ಕಟ್ಟಿಗೆಗಳ ಕೊರತೆಯೂ ಕಾಡುತ್ತಿದೆಯೆಂದೂ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು