ಕೋವಿಡ್ ಚಿಕಿತ್ಸೆ ಮಾರ್ಗಸೂಚಿಯಲ್ಲಿ ‘ಪ್ಲಾಸ್ಮಾ ಥೆರಪಿ’ ಯನ್ನು ಕೈ ಬಿಟ್ಟ ಕೇಂದ್ರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವುದನ್ನು ಕೇಂದ್ರ ಸರಕಾರವು ಕೈ ಬಿಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು(ICMR) ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಇದರಿಂದ ರೋಗ ಗುಣಮುಖವಾಗುವ ಯಾವುದೇ ದಾಖಲೆಗಳು ಕಂಡು ಬಂದಿರಲಿಲ್ಲವೆನ್ನಲಾಗಿದೆ. ಅಂಕಿಅಂಶಗಳನ್ನು ಆಧಾರವಾಗಿರಿಸಿ, ಸರಕಾರ ತೀರ್ಮಾನಕ್ಕೆ ಬಂದಿದೆ.

ಪ್ಲಾಸ್ಮಾ ಥೆರಪಿಯನ್ನು ಕೋವಿಡ್ ರೋಗಿಗಳಿಗೆ ಚಿಕಿತ್ಸೆಯಾಗಿ ಬಳಸುವುದನ್ನು ಟೀಕಿಸಿ, ಹಲವು ವೈದ್ಯಕೀಯ ತಜ್ಞರು ಈ ಮೊದಲೂ ಧ್ವನಿಯೆತ್ತಿದ್ದರು.

ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯು ಶುಕ್ರವಾರದಂದು ಸಭೆ ಸೇರಿತ್ತು. ಸಭೆಯಲ್ಲಿಯೂ ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈ ಬಿಡುವ ನಿರ್ಣಯಕ್ಕೆ ಎಲ್ಲಾ ಸದಸ್ಯರೂ ಬೆಂಬಲ ಸೂಚಿಸಿದ್ದರು. ಈ ಕಾರ್ಯಪಡೆಯು, ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು