ಕೋವಿಡ್ ಬಿಕ್ಕಟ್ಟು ನಿರ್ವಹಣೆಗೆ ಪ್ರಧಾನಿ ಅಸಮರ್ಥ: ಟ್ವಿಟ್ಟರ್ ನಲ್ಲಿ  ‘ಮೋದಿ ರಾಜಿನಾಮೆ ನೀಡಿ’ ಟ್ರೇಡಿಂಗ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರದಿಂದ ಪ್ರತಿದಿನ ಸುಮಾರು 3 ಲಕ್ಷದಷ್ಟು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಕೊರೊನಾ ಸೋಂಕಿತರು  ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಮ್ಲಜನಕವಿಲ್ಲದೇ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯಗಳು ಚಿಕಿತ್ಸೆಗೆ ರೆಮ್‌ಡಿಸಿವಿರ್ ಔಷಧಿಯಿಲ್ಲ, ಲಸಿಕೆ ಇಲ್ಲ ಎಂದು ದೂರುತ್ತಿವೆ. ಇಂಥ ದುರಿತ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತ್ರ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ದೇಶದಲ್ಲಿನ ಅಲ್ಲೋಲಕಲ್ಲೋಲಕ್ಕೆ ಅವರ ಅಸಾಮರ್ಥ್ಯವೇ ಕಾರಣವಾಗಿದ್ದು ಮೋದಿ ಕೂಡಲೇ ರಾಜೀನಾಮೆ ಕೊಡಬೇಕೆಂದು ಎನ್ನುವ ಕೂಗು ಟ್ವಿಟರ್‌ನಲ್ಲಿ ಜೋರಾಗಿ ನಡೆದಿದೆ,

ಟ್ವಿಟ್ಟರ್ ನಲ್ಲಿ #ResignModi (‘ಮೋದಿ ರಾಜೀನಾಮೆ ನೀಡಿ’) ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ನಂ 1 ಸ್ಥಾನದಲ್ಲಿ‌ ಟ್ರೆಂಡಿಂಗ್‌ ಆಗುತ್ತಿದೆ. ನೆಟ್ಟಿಗರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವನ್ನು ತರಾಟೆಗೆ ತೆಗೆದುಕೊಂಡಿದ್ದು, ದುರ್ಬಲ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಟಿಎಂಸಿ  “ಗಗನಕ್ಕೇರಿರುವ COVID-19 ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಜವಾಬ್ದಾರನಾಗಿರಬೇಕು, ಯಾವುದೇ ಯೋಜನೆ, ಆಡಳಿತಾತ್ಮಕ ಸಾಮರ್ಥ್ಯಗಳು, ಸಂಪೂರ್ಣ ಅಸಮರ್ಥತೆ. ಅವರು ಮೊದಲೇ ಯೋಜಿಸಲಿಲ್ಲ, ಅಥವಾ ಯಾರಿಗೂ ಹಾಗೆ ಮಾಡಲು ಅವನು ಅನುಮತಿಸಲಿಲ್ಲ, ಇದಕ್ಕೆಲ್ಲ ಪ್ರಧಾನಿ ಮೋದಿ ಅವರೇ ಹೊಣೆಗಾರರು” ಎಂದು ಟಿಎಂಸಿ ಟೀಕಿಸಿದೆ.

‘ಇಷ್ಟು ಜನರು ಸೇರಿರುವುದು ನಾನು ನೋಡಿರಲಿಲ್ಲ’ ಎಂದು ಪ್ರಚಾರ ಮಾಡುವ ಪ್ರಧಾನಿ ಮೋದಿಗೆ ದೇಶದ ಜನರ ಜೀವಕ್ಕಿಂತ ಚುನಾವಣಾ ಪ್ರಚಾರವೇ ಮುಖ್ಯವಾಗಿದೆ, ಕೊರೊನಾ ಬಿಕ್ಕಟ್ಟು ಎದುರಿಸುವಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅಸಮರ್ಥ ಮತ್ತು ವಿಫಲವಾಗಿದೆ ಎಂದು ನೆಟ್ಟಿಗರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.  “ಮೋದಿ ರಾಜಿನಾಮೆ ನೀಡಿ” ಎಂದು ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಈಗ ನಂ 1 ಸ್ಥಾನದ ಟ್ರೆಂಡ್ ಆಗ್ತಿದೆ.

ದೇಶದಲ್ಲಿ ದಿನೇದಿನೇ ಸೋಂಕು ಉಲ್ಬಣಗೊಳ್ಳುತ್ತಿದೆ, ಸಾವಿರಾರು ಜನರು ಸಾವನ್ನಪ್ಪಿದ್ದಾರೆ, ಆದರೂ ಪ್ರಧಾನಿಗಳು ಪಕ್ಷದ ಪ್ರಚಾರದಲ್ಲಿ ತೊಡಗಿದ್ದಾರೆ. ಕೋವಿಡ್ ಪ್ರಕರಣ ಹೆಚ್ಚಳಕ್ಕೆ ಮೋದಿ ಕಾರಣ, ನೈತಿಕ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಬೇಕೆಂಬ ಕೂಗು ಈಗ ಟ್ವಿಟ್ಟರ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು