ಬಿಜೆಪಿ ಗೆದ್ದರೆ ಬಿಹಾರಕ್ಕೆ ಕೋವಿಡ್ ಲಸಿಕೆ ಉಚಿತ! ಬೇರೆ ರಾಜ್ಯದಲ್ಲಿರುವವರು ಕೇಂದ್ರ ಸರಕಾರಕ್ಕೆ ಲೆಕ್ಕಕ್ಕಿಲ್ಲವೇ?

bjp
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(23-10-2020): ಚುನಾವಣೆ ಇರುವ ರಾಜ್ಯಗಳಿಗೆ ಮಾತ್ರ ಬಿಜೆಪಿ ಕೋವಿಡ್ ಲಸಿಕೆ ಉಚಿತವಾಗಿ ಘೋಷಿಸಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

 ಕರ್ನಾಟಕದಲ್ಲಿ ಚುನಾವಣೆ ಇಲ್ಲ ಎಂಬ ಕಾರಣಕ್ಕಾಗಿ ನಮ್ಮ ಆರೋಗ್ಯ ಲೆಕ್ಕಕ್ಕಿಲ್ಲವೇ? ಕನ್ನಡಿಗರ ಆರೋಗ್ಯ ಲೆಕ್ಕಕ್ಕಿಲ್ಲವೆ? ಬಿಜೆಪಿ ರಾಜ್ಯಾಧ್ಯಕ್ಷರಿಗೆ ಧಮ್ ಇದ್ದರೆ, ಅವರದೇ ಪಕ್ಷ ಅಧಿಕಾರದಲ್ಲಿರುವ ಕೇಂದ್ರ ಸಚಿವರ ಮನವೊಲಿಸಿ ಕರ್ನಾಟಕಕ್ಕೂ ಉಚಿತವಾಗಿ ಲಸಿಕೆ ಕೊಡಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

PRESS KANNADA

ಟ್ವೀಟರ್  ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು 25 ಮಂದಿ ಬಿಜೆಪಿ ಸಂಸದರನ್ನು ಉಲ್ಲೇಖಿಸಿ ಪ್ರಶ್ನೆಗಳನ್ನು ಎತ್ತಿರುವ ಸಿದ್ದರಾಮಯ್ಯ ಅವರು ಕನ್ನಡಿಗರ ಬಗ್ಗೆ ನಿರ್ಲಕ್ಷ್ಯವೇಕೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೊರೊನಾ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಔಷಧಿ ರಾಜಕೀಯ ಮಾಡುತ್ತಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಬಿಜೆಪಿ ಗೆದ್ದರೆ ಬಿಹಾರದಲ್ಲಿ ಔಷಧಿ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದು ಕೇಂದ್ರ ಸರಕಾರ ನಿಜಕ್ಕೂ ಬೇಜವಾಬ್ಧಾರಿಯಿಂದ ವರ್ತಿಸಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಆಡಳಿತವಿದೆ. ಈ ರಾಜ್ಯಗಳಿಗೂ ಕೋವಿಡ್ ಲಸಿಕೆಯನ್ನು ಕೇಂದ್ರ ಸರಕಾರ ನೀಡುತ್ತಾ ಎನ್ನುವ ಪ್ರಶ್ನೆ ಮೂಡಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು