ಬೆಂಗಳೂರು(23-10-2020): ಕೋವಿಡ್ ಪರೀಕ್ಷೆಗೆ ಬಂದ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಡಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಡಿಗೆಹಳ್ಳಿ ಸ್ಥಳೀಯ ನಿವಾಸಿಗಳಾದ ಕೇಶವ್, ಜಯರಾಮ್ ಹಾಗೂ ನಾರಾಯಣ್ ಎಂಬವರು ವೈದ್ಯರ ಮೇಲೆ ಹಲ್ಲೆ ಮಾಡಿದವರು.
ಕೋವಿಡ್ ಪರೀಕ್ಷೆಗೆ ಬಂದ ವೈದ್ಯರನ್ನು ತಡೆದು ನೀವು ಯಾಕೆ ಬಂದಿದ್ದೀರಿ ಎಂದು ಈ ಮೂವರು ಪ್ರಶ್ನಿಸಿ ವೈದ್ಯರಿಗೆ ಹಲ್ಲೆ ಮಾಡಿದ್ದಾರೆ. ವೈದ್ಯರ ಕೈಗೆ ಗಾಯವಾಗಿದೆ. ಅವರ ಕನ್ನಡಕ ಒಡೆದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.