ನಂ.1 ಭ್ರಷ್ಟರಾಷ್ಟ್ರ ಭಾರತ-ಸಮೀಕ್ಷೆ|ವಿಶ್ವದ ಮುಂದೆ ಭಾರತವನ್ನು ತಲೆತಗ್ಗಿಸುವಂತೆ ಮಾಡಿದ ಭ್ರಷ್ಟರು!

corruption
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(27-11-2020): ಭ್ರಷ್ಟಾಚಾರದ ಕುರಿತು ಟ್ರಾನ್ಸ್ ಪರೆನ್ಸಿ ಇಂಟರ್‌ನ್ಯಾಷನಲ್‌ ಸಮೀಕ್ಷೆಯನ್ನು ಬಿಚ್ಚಿಟ್ಟಿದ್ದು, ವರದಿ ಭಾರತವನ್ನು ಏಷ್ಯಾದ ಮುಂದೆ ತಲೆತಗ್ಗಿಸುವಂತೆ ಮಾಡಿದೆ.

ಟ್ರಾನ್ಸ್ ಪರೆನ್ಸಿ ಇಂಟರ್‌ನ್ಯಾಷನಲ್‌ ಸಮೀಕ್ಷೆ ಪ್ರಕಾರ ಏಷ್ಯಾ ಖಂಡದಲ್ಲೇ ಭಾರತ ಅತ್ಯಂತ ಹೆಚ್ಚು ಭ್ರಷ್ಟಾಚಾರವನ್ನು ಹೊಂದಿರುವ ರಾಷ್ಟ್ರವಾಗಿದೆ.

ಭಾರತದಲ್ಲಿ ಸಾರ್ವಜನಿಕ ಸೇವೆಗಳನ್ನು ಪಡೆಯಲು ವೈಯಕ್ತಿಕ ಸಂಪರ್ಕಗಳನ್ನು ಹೆಚ್ಚಾಗಿ ಜನರು ಪಡೆದುಕೊಳ್ಳುತ್ತಿದ್ದಾರೆ. ಲಂಚ ಪಾವತಿಸಿದ ಶೇ.50 ರಷ್ಟು ಜನರಲ್ಲಿ ಶೇ.32 ರಷ್ಟು ಜನರು ವೈಯಕ್ತಿಕ ಸಂಪರ್ಕಗಳನ್ನು ಬಳಸದೆ ತಾವು ಸೇವೆಯನ್ನು ಪಡೆಯಲು ಸಾಧ್ಯವಿರಲಿಲ್ಲ ಎಂದು ಸಮೀಕ್ಷೆ ವೇಳೆ ಬಾಯ್ಬಿಟ್ಟಿದ್ದಾರೆ.

2020ರ ಜೂನ್ 17 ರಿಂದ ಜುಲೈ 17ರ ಒಂದು ತಿಂಗಳ  ನಡುವೆ ಭಾರತದಲ್ಲಿ 20,000 ಜನರ ಅಭಿಪ್ರಾಯದ ಆಧಾರದಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ಶೇ.63 ಜನರು ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಮುಂದೆ ಬರುವುದಿಲ್ಲ. ಅವರಿಗೆ ಭ್ರಷ್ಟ ಅಧಿಕಾರಿಗಳು ತಮ್ಮ ಮೇಲೆ ಪ್ರತಿಕಾರವನ್ನು ತೀರಿಸುತ್ತಾರೆ ಎಂಬ ಭಯವಿದೆ.

 ಭಾರತದಲ್ಲಿ ಶೇ89 ರಷ್ಟು ಜನರು ಸರ್ಕಾರದ ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆ ಎಂದು ಹೇಳುತ್ತಾರೆ. ಶೇ.18 ರಷ್ಟು ಜನರು ಮತಗಳಿಗಾಗಿ ಲಂಚವನ್ನು ಕೂಡ ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು