ಕೊರೊನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ವೇತನ : ಟಾಟಾ ಸ್ಟೀಲ್ ಕಂಪನಿ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ : ಕೊರೊನಾ ಎರಡನೇ ಅಲೆಯ ಭೀಕರತೆ ಜನತೆಗೆ ಭಾರೀ ಆತಂಕವನ್ನು ಸೃಷ್ಟಿಸಿದೆ. ದೇಶದಲ್ಲಿ ಪ್ರತಿದಿನ ನಾಲ್ಕು ಸಾವಿರ ಆಸುಪಾಸಿನಲ್ಲಿ ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಇಂಥ ದುರಿತ ಕಾಲದಲ್ಲಿ ಟಾಟಾ ಸ್ಟೀಲ್ ಕಂಪನಿ ತನ್ನ ನೌಕರರ ‌ಜೀವನ ಸುರಕ್ಷತೆಗಾಗಿ ಹೊಸ ಆದೇಶ ಒಂದನ್ನು ಘೋಷಣೆ ಮಾಡಿದೆ.

ಟಾಟಾ ಸ್ಟೀಲ್ ಘೋಷಣೆ ಮಾಡಿದ ಆ ವಿಶೇಷ ಸ್ಕೀಮ್ ಏನೆಂದರೆ ಕರೋನಾ ಮಹಾಮಾರಿಯಿಂದಾಗಿ ಮೃತಪಟ್ಟ ಕಂಪನಿಯ ನೌಕರನ ಪರಿವಾರ ಅಥವಾ ನಾಮಿನಿಗೆ ಮುಂದಿನ 60 ವರ್ಷದ ತನಕ ಕಂಪನಿ ವತಿಯಿಂದ ವೇತನ ಸಿಗಲಿದೆ.

ಈ ಕುರಿತು ಸುತ್ತೋಲೆ ಹೊರಡಿಸಿದ ಟಾಟಾ ಸ್ಟೀಲ್
ತನ್ನ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಲಭ್ಯ ಇರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದೆ. ಕರೋನಾದಿಂದಾಗಿ ಒಂದು ವೇಳೆ ಕಂಪನಿ ನೌಕರ ಮೃತಪಟ್ಟರೆ, ಆತನ ಪರಿವಾರಕ್ಕೆ 60 ವರ್ಷದ ತನಕ ವೇತನ ಅಷ್ಟೇ ಅಲ್ಲ, ಮೆಡಿಕಲ್ ಬೆನಿಫಿಟ್ಸ್, ಹೌಸಿಂಗ್ ಫೆಸಿಲಿಟಿ ಸಿಗಲಿದೆ. ಅಷ್ಟೇ ಅಲ್ಲ, ನೌಕರರ ಮಕ್ಕಳ ಗ್ರ್ಯಾಜುವೇಶನ್ ತನಕದ ಶೈಕ್ಷಣಿಕ ವೆಚ್ಚವನ್ನೂ ಕಂಪನಿ ಭರಿಸಲಿದೆ ಎಂದು ಆದೇಶಿಸಿದೆ.

ನಮ್ಮ ಟಾಟಾ ಸ್ಟೀಲ್ ಮ್ಯಾನೇಜ್ಮೆಂಟ್ ಕಂಪನಿ ಎಂದೆಂದಿಗೂ ತನ್ನ ನೌಕರರು ಹಾಗೂ ಪಾಲುದಾರರ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡುತ್ತದೆ. ಅದೇ ನಿಟ್ಟಿನಲ್ಲಿ ಈ ಘೋಷಣೆ ಮಾಡಲಾಗಿದೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಟಾಟಾ ಸ್ಟೀಲ್ ತನ್ನೆಲ್ಲಾ ಕಾರ್ಮಿಕರ ಹಿತಾಸಕ್ತಿ ಕಾಪಾಡಲಿದೆ ಎಂದು ಕಂಪನಿ ಸುತ್ತೋಲೆಯಲ್ಲಿ ಹೇಳಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು