ಕೊರೊನಾದಿಂದ ಅನಾಥರಾದ ಮಕ್ಕಳ ಪಾಲನೆ ಶಿಕ್ಷಣ ಹಾಗೂ ಪಾಲನೆಗೆ ದೆಹಲಿ ಸರ್ಕಾರ ಬದ್ಧ : ಸಿಎಂ ಅರವಿಂದ್ ಕೇಜ್ರಿವಾಲ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ, ಅವರ ಮಕ್ಕಳ ಪಾಲನೆ ಮಾಡುವ ಜವಾಬ್ದಾರಿ ಹಾಗೂ ಶೈಕ್ಷಣಿಕ ಖರ್ಚು ಪೂರ್ತಿ ಸರ್ಕಾರ ಭರಿಸುತ್ತದೆ ಎಂದು ದೆಹಲಿ ಸಿಎಂ ಘೋಷಣೆ ಮಾಡಿದ್ದಾರೆ.

ಕೊರೊನಾ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ‘ಉಚಿತ ಶಿಕ್ಷಣ ಹಾಗೂ ಅವರ ಪಾಲನೆ ಹಾಗೂ ಇತರೆ ವೆಚ್ಚಗಳನ್ನು ಭರಿಸುವುದಾಗಿ ಹೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾಲಕರನ್ನು ಕಳೆದುಕೊಂಡವರ ಕಣ್ಣೀರು ಒರೆಸಲು ದೆಹಲಿ ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

ತಂದೆ ತಾಯಿ ಕಳೆದುಕೊಂಡು ಸಂಕಷ್ಟದಲ್ಲಿರುವ ಮಕ್ಕಳೇ ಯಾವುದೇ ಚಿಂತೆ ಮಾಡಬೇಡಿ, ನೀವು ಅನಾಥರಲ್ಲ, ನಾನು ನಿಮ್ಮ ನೋವಿನಲ್ಲಿ ಭಾಗಿದಾರನಾಗಿದ್ದೇನೆ. ನಾನು ನಿಮ್ಮೊಂದಿಗೆ ಇದ್ದೇನೆ. ನಿಮ್ಮ ಎಲ್ಲಾ ಖರ್ಚು ವೆಚ್ಚ ನಮ್ಮ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಧೈರ್ಯದ ಮಾತುಗಳು ಹೇಳಿದ್ದಾರೆ. ಕುಟುಂಬದ ಜವಾಬ್ದಾರಿ ನಿಭಾಯಿಸುವ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬದವರಿಗೂ ನಾನು ನಿಮ್ಮ ಮಗ ನಿಮ್ಮೊಂದಿಗೆ ಇದ್ದೇನೆ. ನೀವು ಚಿಂತೆ ಮಾಡಬೇಡಿ. ನಿಮ್ಮ ಮನೆಯ ಜವಾಬ್ದಾರಿ ನಮ್ಮ ಸರ್ಕಾರ ನೋಡುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಜನತೆಗೆ ಮನದಾಳದ ಮಾತುಗಳು ತಿಳಿಸಿದ್ದಾರೆ.

ಇದೇ ರೀತಿಯಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಗುರುವಾರ ಕೊರೊನಾ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ‘ಉಚಿತ ಶಿಕ್ಷಣ ಹಾಗೂ ಇತರೆ ವೆಚ್ಚಗಳನ್ನು ಭರಿಸುವುದಾಗಿ ಘೋಷಣೆ ಮಾಡಿದ್ದರು. ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಗಳ ಇಂಥ ನಿರ್ಧಾರಗಳು ನಿಜಕ್ಕೂ ಶ್ಲಾಘನೀಯ ಎನಿಸುತ್ತವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು