ದೆಹಲಿ(19-10-2020): 2021 ರ ಫೆಬ್ರವರಿಯಲ್ಲಿ ಐವತ್ತು ಶೇಕಡಾ ಭಾರತೀಯರಿಗೆ ಕೊರೋನಾ ಸೋಂಕು ತಗುಲುವ ಅಪಾಯವಿದೆಯೆನ್ನಲಾಗಿದೆ. ರೋಗ ಹರಡುವಿಕೆಯನ್ನು ತಡೆಯುವುದಕ್ಕಾಗಿ ಸರಕಾರವು ನೇಮಿಸಿದ ಸಮಿತಿ ಈ ಮುನ್ನೆಚ್ಚರಿಕೆ ನೀಡಿದೆ.
ಶೇಕಡಾ ಮೂವತ್ತರಷ್ಟು ಭಾರತೀಯರಿಗೆ ಈಗಾಗಲೇ ಕೊರೋನಾ ತಗುಲಿದ್ದು, 2021ರ ಫೆಬ್ರವರಿಯಲ್ಲಿ ಇದು ಐವತ್ತು ಶೇಕಡಾಗೆ ಏರಬಹುದೆಂಬುದು ಸಮಿತಿಯಲ್ಲಿರುವ ಖಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿ ಪ್ರೊಫೆಸರ್ ಮಹೇಂದ್ರ ಅಗರ್ವಾಲ್ ಹೇಳಿದ್ದಾರೆ.
ಈ ವಿಶೇಷ ಸಮಿತಿಯು ತೋರಿಸುವ ಕೊರೋನಾ ತಗುಲಿದವರ ಪ್ರಮಾಣವು ಸರಕಾರೀ ಸರ್ವೇಗಳು ತೋರಿಸಿದ ಪ್ರಮಾಣಕ್ಕಿಂತ ತುಂಬಾ ಹೆಚ್ಚಿದೆಯೆಂದೂ ಅಗರ್ವಾಲ್ ತಿಳಿಸಿದ್ದಾರೆ. ಅದೇ ವೇಳೆ, ಫೆಬ್ರವರಿಯಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳು ಬಹುತೇಕ ಕಡಿಮೆಯಾಗಲಿದೆಯೆಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಕೊರೋನಾ ಪ್ರಕರಣಗಳಲ್ಲಿ ಭಾರತ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದೆ