ರಾಜ್ಯದಲ್ಲಿ ಮುಂದುವರಿಯುತ್ತಿದೆ ಕೊರೋನಾ ಅಟ್ಟಹಾಸ; ಕರ್ನಾಟಕದಲ್ಲಿ ಇಂದು ಕೋರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತೆ

corona
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(14/10/2020): ಕೊರೋನಾ ಮಹಾಮಾರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುಗತಿ ಕಾಣುತ್ತಿದ್ದ,  ಇಂದು 9,265 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.  ಒಟ್ಟು ಸೋಂಕಿತರ ಸಂಖ್ಯೆ 7,35,371ಕ್ಕೆ ಏರಿಕೆಯಾಗಿದೆ.

ಕೊರೋನಾ ಅಟ್ಟಹಾಸದಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 75 ಮಂದಿ  ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,198ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರವೊಂದರಲ್ಲೆ  4,574 ಹೊಸ ಪ್ರಕರಣಗಳು ಇಂದು ವರದಿಯಾಗಿದೆ.  ನಗರದ ಒಟ್ಟು ಸೋಂಕಿತರ ಸಂಖ್ಯೆ 2,93,405ಕ್ಕೆ ಏರಿಕೆಯಾಗಿದೆ. ಇನ್ನು 27 ಮಂದಿಯಾಗಿದ್ದು ಸಾವಿನ ಸಂಖ್ಯೆ 3,417ಕ್ಕೆ ಏರಿಕೆಯಾಗಿದೆ.

ಇಂದು 8,662 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 6,11,167ಕ್ಕೆ ಏರಿಕೆಯಾಗಿದೆ. 1,13,987 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು