ಡೆಲ್ಟಾ ಆಯಿತು, ಒಮಿಕ್ರಾನ್ ಆಯಿತು .ಇದೀಗ ಡೆಲ್ಮಿಕ್ರಾನ್ ಎಂಬ ಹೊಸ ರೂಪಾಂತರಿಯ ಭೀತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಶ್ವದಾದ್ಯಂತ ವ್ಯಾಪಕವಾಗಿ ಭೀತಿಯೆಬ್ಬಿಸಿದ ಕೊರೋನಾ ವೈರಸ್ ಸೋಂಕು ಒಂದೊಂದು ರೂಪಾಂತರಿಯ ಮೂಲಕ ವಿಶ್ವವನ್ನು ಮತ್ತೆ ನಿಬ್ಬೆರಗಾಗಿಸುತ್ತಿದೆ.

ಡೆಲ್ಟಾ ಅಲೆಯು ಮಾಸಿ ಹೋಗುತ್ತಿರುವಾಗಲೇ, ಓಮಿಕ್ರಾನ್ ಎಂಬ ನವ ರೂಪಾಂತರಿ ಆವರಿಸಿತ್ತು. ಇದೆರಡರ ಸಂಪೂರ್ಣ ಹಾವಳಿ ಮುಗಿಯದಿರುವಾಗಲೇ ಇದೀಗ ಹೊಸದೊಂದು ರೂಪಾಂತರಿಯೊಂದು ಆವರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದುವೇ ಡೆಲ್ಟಾ ಮತ್ತು ಓಮಿಕ್ರಾನ್ ಸಂಯೋಜನೆಯ ಡೆಲ್ಮಿಕ್ರಾನ್ ರೂಪಾಂತರಿ. ಇದು ಓಮಿಕ್ರಾನ್ ಗಿಂತಲೂ ತೀವ್ರ ಸ್ವರೂಪವನ್ನು ಹೊಂದಿದೆಯಂತೆ.

ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತಿದೆ. ಇದಕ್ಕೆ ಡೆಲ್ಟಾ ಮತ್ತು ಓಮಿಕ್ರಾನ್ ತಳಿಗಳ ಅವಳಿ ಸ್ಕೈಕ್‌ಗಳ ಡೆಲ್ಮಿಕ್ರಾನ್ ಕಾರಣ ಎಂದು ಮಹಾರಾಷ್ಟ್ರದ ಕೋವಿಡ್ 19 ಕಾರ್ಯಪಡೆಯ ಸದಸ್ಯ ಶಶಾಂಕ್ ಜೋಶಿ ಹೇಳಿದ್ದಾರೆ.

ಭಾರತದಲ್ಲಿ ಡೆಲ್ಟಾ ತಳಿ ವ್ಯಾಪಕವಾಗಿ ಹರಡಿದೆ. ಈ ನಡುವೆ ಓಮಿಕ್ರಾನ್ ತಳಿ ಹೇಗೆ ವರ್ತಿಸುತ್ತದೆ ಎಂಬುದನ್ನು ಇನ್ನೂ ನೋಡಬೇಕಿದೆ. ಪ್ರಸ್ತುತ ಡೆಲ್ಟಾ ತಳಿಯ ಉಪ ಭಾಗಗಳು ಭಾರತದಲ್ಲಿ ಸೋಂಕು ಹರಡಲು ಮುಖ್ಯ ಕಾರಣವಾಗಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು