ಕೋರೋನಾ ವಿರುದ್ಧದ ಹೋರಾಟದಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸುವತ್ತ ಸೌದಿ ಅರೇಬಿಯಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಿಯಾದ್(14-12-2020): ಕೊರೋನಾ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸುವತ್ತ ಸೌದಿ ಅರೇಬಿಯಾ ದಾಪುಗಾಲಿಡುತ್ತಿದೆಯೆಂದು ವರದಿಯಾಗಿದೆ. ಸೌದಿಯಾದ್ಯಂತ ಇಂದು ಹೊಸದಾಗಿ ಕೊರೋನಾ ಸೋಂಕು ತಗುಲಿದವರ ಸಂಖ್ಯೆ ಬರೇ ನೂರ ಇಪ್ಪತ್ತೈದು ಎಂದು ಅಧಿಕೃತ ಅಂಕಿ ಅಂಶ ತಿಳಿಸಿದೆ.

ಅದೇ ವೇಳೆ ರೋಗ ವಾಸಿಯಾದವರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಇಂದು ಸುಮಾರು ಇನ್ನೂರ ನಲ್ವತ್ತಮೂರು ಮಂದಿ ರೋಗದಿಂದ ಮುಕ್ತರಾಗಿದ್ದಾರೆ. ಈ ವರೆಗೆ ಸೌದಿ ಅರೇಬಿಯಾದಲ್ಲಿ ಕೊರೋನಾ ಬಾಧಿತರ ಒಟ್ಟು ಸಂಖ್ಯೆ 3,60,013 ಮತ್ತು ಒಟ್ಟು ರೋಗ ವಾಸಿಯಾದವರ ಸಂಖ್ಯೆ 3,50,792. ಕೊರೋನಾ ಕಾರಣದಿಂದ ಇಂದು ಮೃತಪಟ್ಟವರ ಒಟ್ಟು ಸಂಖ್ಯೆ ಒಂಭತ್ತು ಆಗಿದೆ.

ಸದ್ಯ 3169 ಮಂದಿ ರೋಗಿಗಳಾಗಿ ಕಳೆಯುತ್ತಿದ್ದು, ಅವರಲ್ಲಿ 493 ಮಂದಿ ಗಂಭೀರಾವಸ್ಥೆಯಲ್ಲಿರುವವರನ್ನು ಹೊರತುಪಡಿಸಿ, ಉಳಿದವರ ಆರೋಗ್ಯವು ಸ್ಥಿರವಾಗಿದೆ. ಸೌದಿಯ ರೋಗ ಗುಣಮುಖವಾಗುವವರ ಶೇಕಡಾವಾರು ಪ್ರಮಾಣ 97.5 ಆಗಿದ್ದು, ಸಾವಿಗೀಡಾದವರ ಶೇಕಡಾವಾರು ಲೆಕ್ಕಾಚಾರ 1.7 ಆಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು