ಕೊರೋನಾ ರೋಗಿಗಳು ರೆಮ್ಡಿಸಿವಿರ್ ಬಳಸದಿರಿ | ಡಬ್ಲ್ಯುಎಚ್ಒ ಎಚ್ಚರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿನೀವಾ(20-11-2020): ಕೋರೋನಾ ರೋಗಿಗಳು ರೆಮ್ಡಿಸಿವಿರನ್ನು ಉಪಯೋಗಿಸಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಭಾರತದ ಸೇರಿದಂತೆ ಮೂವತ್ತು ದೇಶಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ರೆಮ್ಡಿಸಿವಿರಿನಿಂದ ಯಾವುದೇ ಫಲವಿಲ್ಲವೆಂದು ಕಂಡುಬಂದಿದೆಯೆನ್ನಲಾಗಿದೆ.

ಈ ಔಷಧವು ಕೊರೋನಾ ರೋಗಿಗಳಿಗೆ ಪ್ರಯೋಜನಕಾರಿಯಲ್ಲ ಎಂದು ಡಬ್ಲ್ಯುಎಚ್ಒ ಸಂಸ್ಥೆಯಲ್ಲಿನ ಅಂತಾರಾಷ್ಟ್ರೀಯ ತಜ್ಞರನ್ನೂ ಒಳಗೊಂಡಿರುವ ಗೈಡ್ಲೈನ್ ಡೆವಲಪ್ಮೆಂಟ್ ಗ್ರೂಪ್(ಜಿಡಿಜಿ) ವಾದಿಸಿದೆ. ವಿಶ್ವಾದ್ಯಂತ ಏಳು ಸಾವಿರಕ್ಕೂ ಮಿಕ್ಕ ರೋಗಿಗಳ ಮೇಲೆ ರೆಮ್ಡಿಸಿವಿರನ್ನು ಪರೀಕ್ಷಿಸಲಾಯಿತು. ಅದರಲ್ಲಿ ಹೆಚ್ಚಿನ ಸಕಾರಾತ್ಮಕ ಪರಿಣಾಮವೇನೂ ಕಾಣಿಸಿಲ್ಲ.

ಕೊರೋನಾ ರೋಗವು ತೀವ್ರವಾಗಿ ಕಾಡಿದ ಹಿನ್ನೆಲೆಯಲ್ಲಿ ಅಮೇರಿಕಾ ಮತ್ತು ಕೆಲವು ಐರೋಪ್ಯ ದೇಶಗಳು ರೆಮ್ಡಿಸಿವಿರನ್ನು ಉಪಯೋಗಿಸಲು ಅನುಮತಿ ನೀಡಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು