ಕೊರೊನಾ ರಾತ್ರಿ ಹರಡುತ್ತದೆ ಎಂದು ಅದ್ಯಾವ ತಜ್ಞರು ಸರ್ಕಾರಕ್ಕೆ ಹೇಳಿದ್ದಾರೆ: ರಾಜ್ಯ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೊರೊನಾ ಸೋಂಕು ಹಗಲಿನಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಅದ್ಯಾವ ತಜ್ಞರು ಸರ್ಕಾರಕ್ಕೆ ಹೇಳಿದ್ದಾರೆ? ರಾತ್ರಿ ವೇಳೆ ಜನರು ಹೊರ ಬರುವುದೇ ವಿರಳ. ಈ ವೇಳೆಯಲ್ಲಿ ಬಿಜೆಪಿ ಸರ್ಕಾರ ನೈಟ್ ಕರ್ಫ್ಯೂ ಹೇರಿ ಆರ್ಥಿಕತೆಯನ್ನೇ ಹಾಳು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಇಂದು ರಾತ್ರಿ ಹತ್ತು ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ನಿರ್ಧಾರವನ್ನು ಟೀಕಿಸಿದ್ದಾರೆ.

ರಾತ್ರಿ ಹತ್ತು ಗಂಟೆಯ ನಂತರ ಯಾವುದೇ ಜನಜೀವನ ಓಡಾಡುವುದು ತೀರ ಕಡಿಮೆ, ಹಗಲಿನಲ್ಲಿ ಹೆಚ್ಚು ಜನರ ಓಡಾಟ ಇದೆ. ಹೀಗಿರುವಾಗ ಹಗಲು ಬಿಟ್ಟು ಕೇವಲ ರಾತ್ರಿ ಮಾತ್ರ ಕರ್ಫ್ಯೂ ಜಾರಿ ಮಾಡುವುದು ಎಂದರೆ ಕೊರೊನಾ ಬರೀ ಕತ್ತಲಿನಲ್ಲಿ ಮಾತ್ರ ಬರುತ್ತದಯೇ?ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಇಂತಹ ಅವೈಜ್ಞಾನಿಕ ಧೋರಣೆಯಿಂದ ಸಾರ್ವಜನಿಕರನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಇಂತಹ ಹಲವು ಕಾರಣಗಳಿಗಾಗಿ ಈ ಸರ್ಕಾರವನ್ನು ಜನರು ಕಿತ್ತು ಹಾಕಬೇಕು. 3 ಉಪ ಚುನಾವಣೆಗಳಲ್ಲಿ ಬಿಜೆಪಿಯ ವಿರುದ್ಧ ಮತ ಚಲಾಯಿಸುವ ಮೂಲಕ ಇವರಿಗೆ ಬುದ್ಧಿ ಕಲಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು