ಕೊರೊನಾ ನಿಯಂತ್ರಣದಲ್ಲಿ ಬೀದರ್ ಜಿಲ್ಲೆ ರಾಜ್ಯಕ್ಕೆ ಫಸ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೀದರ್: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಯ ಹೆಚ್ಚಿನ ಜವಾಬ್ದಾರಿ ವಹಿಸಿ ಕೊರೊನಾ ಕಂಟ್ರೋಲ್ ಮಾಡುವಂತೆ ಸೂಚಿಸಲಾಗಿದೆ.

ಈ ಹಿಂದೆ ಬೀದರ್ ಜಿಲ್ಲೆಯಲ್ಲಿ ಪ್ರತಿದಿನ 500 ಆಸು ಪಾಸಿನಲ್ಲಿ ಕೊರೊನಾ ಕೇಸ್ ಪತ್ತೆಯಾಗುತ್ತದ್ದವು. ಜಿಲ್ಲಾಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಕೊವಿಡ್ ಪ್ರಕರಣಗಳ ಸಂಖ್ಯೆ ಮಿತಿಮೀರಿತ್ತು, ರಾಜ್ಯದಲ್ಲಿ ಅತೀ ಹೆಚ್ಚು ಕೇಸ್ ಎನ್ನುವ ಜಿಲ್ಲೆಯಾಗಿ ರೆಡ್ ಝೋನ್ ಗೆ ಸೇರ್ಪಡೆ ಆಗಿತ್ತು.

ಆದರೆ ಬೀದರ ಜಿಲ್ಲೆಯಲ್ಲಿ ಕೊರೊನಾ ಕೇಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಈ ಹಿಂದೆ ದಿನಾಲೂ 500 ಕೇಸ್ ಪತ್ತೆಯಾಗುತ್ತಿದ್ದವು, ಈಗ ಪ್ರತಿದಿನ 100 ಆಸುಪಾಸಿನಲ್ಲಿ ಹೊಸ ಕೇಸ್ ವರದಿ ಆಗುತ್ತಿವೆ, ಅಷ್ಟೇ ಅಲ್ಲ ಕೊರೊನಾ ರೋಗದಿಂದ ಗುಣಮುಖರಾಗುವರ ಸಂಖ್ಯೆ ಕೂಡ ಹೆಚ್ಚುತ್ತಿದೆ, ಇದರಿಂದ ಸದ್ಯಕ್ಕೆ ಬೀದರ್ ಜಿಲ್ಲೆಯ ಜನ ಒಂದಿಷ್ಟು ನಿಟ್ಟುಸಿರು ಬಿಟ್ಟಂತೆ ಆಗಿದೆ. ಹೌದು ಬೀದರ್ ಜಿಲ್ಲೆ ಕೋವಿಡ್ ನಿಯಂತ್ರಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪಕ್ಕದ ಮಹಾರಾಷ್ಟ್ರ, ತೆಲಂಗಾಣ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಕೊವಿಡ್ ಸೋಂಕು ಎರಡಂಕಿಗೆ ಇಳಿಮುಖವಾಗಿ ಕೋವಿಡ್ ಮುಕ್ತ ಜಿಲ್ಲೆ ಆಗುವ ನಿರೀಕ್ಷೆಯಲ್ಲಿದೆ.

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನೋಡಿದಾಗ ನಿನ್ನೆ ಒಟ್ಟು 75 ಹೊಸ ಕೇಸ್ ಪತ್ತೆ, ಇಲ್ಲಿಯವರೆಗೆ ಒಟ್ಟು ಕೇಸ್ 23344 , ಸಾವು 352, ನಿನ್ನೆ ಡಿಸ್ಚಾರ್ಜ್ ಒಟ್ಟು 425 , ಒಟ್ಟು ಡಿಸ್ಚಾರ್ಜ್ 21761, 1227 ಸಕ್ರಿಯವಾಗಿವೆ.

ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರು ಬೆಡ್, ಆಕ್ಸಿಜನ್ ಸಿಗದೇ ಫುಟ್ ಫಾತ್ ಮೇಲೆ ನರಳಾಟದ ಘಟನೆಗಳು ಜಿಲ್ಲೆಯ ಜನರಿಗೆ ಭೀತಿಗೆ ಒಳಗಾಗುವಂತೆ ಮಾಡಿತ್ತು. ನಂತರ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಮುಂಜಾಗ್ರತಾ ಕ್ರಮ ಹಾಗೂ ನಿರಂತರ ಶ್ರಮದ ಫಲವಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಮಾಣ ಇಳಿಮುಖವಾಗಲು ಕಾರಣವಾಗಿದೆ.

ಬೀದರ್ ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ತಂಡ ಹೊಸ ಸಿಬ್ಬಂದಿಗಳ ಕಾಳಜಿ ಹಾಗೂ ಜಿಲ್ಲೆಯಲ್ಲಿ ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಜನರ ಸಹಕಾರದಿಂದ ಕೊರೊನಾ ನಿಯಂತ್ರಣಕ್ಕೆ ಸಾಧ್ಯವಾಗಿದೆ ಎನ್ನಲಾಗಿದೆ. ಆದರೆ ಕೊರೊನಾ ಸೋಂಕು ತಗ್ಗಿದೆ ಎಂದು ಜನರು ಮೈಮರೆತು ಓಡಾಡಿದರೆ ಮತ್ತೆ ಸೋಂಕು ಉಲ್ಬಣಿಸಬಹುದು. ರಾಜ್ಯದಲ್ಲಿ ಅತೀ ಕಡಿಮೆ ಸೋಂಕು ಹೊಂದಿರುವ ಜಿಲ್ಲೆಗೆ ಬೀದರ್ ಮೊದಲ ಸ್ಥಾನವಿದೆ. ಇದಕ್ಕೆ ಜಿಲ್ಲಾಡಳಿತ ಸೇರಿದಂತೆ ಜಿಲ್ಲೆಯ ವೈದ್ಯಕೀಯ ಹಾಗೂ ಉಸ್ತುವಾರಿ ಸಚಿವರು ಕೈಗೊಂಡಿರುವ ಅಗತ್ಯ ಕರ್ತವ್ಯಗಳು, ಇದರಿಂದ ಕೊರೊನಾ ಕಂಟ್ರೋಲ್ ಮಾಡಲು ಸಾಧ್ಯವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು