ಕೆವಾಡಿಯಾ(30/10/2020): ಪ್ರಧಾನಿ ಮೋದಿಯವರ ಕಾರ್ಯಕ್ರಮದ ಭದ್ರತೆಗೆ ನಿಯೋಜನೆಗೊಂಡಿದ್ದ 23 ಮಂದಿ ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ನಡೆದಿದೆ.
2 ದಿನಗಳ ಪ್ರವಾಸದ ನಿಮಿತ್ತ ಪ್ರಧಾನಿ ಮೋದಿ ತಮ್ಮ ತವರು ಗುಜರಾತ್ ಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕಾರ್ಯಕ್ರಮದ ಭದ್ರತೆಗೆ 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಅವರಲ್ಲಿ 23 ಮಂದಿ ಕೊರೋನಾ ಪೀಡಿತರಾಗಿರುವುದು ವರದಿಯಾಗಿದೆ.
ತಮ್ಮ ಎರಡು ದಿನದ ಪ್ರವಾಸದಲ್ಲಿ ಪ್ರಧಾನಿ ಮೋದಿ ಕೆವಡಿಯಾ ಮತ್ತು ಅಹಮದಾಬಾದ್ ನಡುವೆ ‘ಸೀಪ್ಲೇನ್‘ ಸೇವೆ ಉದ್ಘಾಟಿಸಲಿದ್ದಾರೆ. ಇದೇ ವೇಳೆ ‘ಸ್ಟ್ಯಾಚ್ಯು ಆಫ್ ಯುನಿಟಿ‘– ವಲಭಭಾಯಿ ಪಟೇಲ್ ಅವರ ಪುತ್ಥಳಿಯ ಸ್ಥಳಕ್ಕೆ ಭೇಟಿ ಕೆಲವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವರದಿಯಾಗಿದೆ.