ನವದೆಹಲಿ: ಕೊರೋನಾ ಲಸಿಕೆಯು ಎಂಟರಿಂದ ಹತ್ತು ತಿಂಗಳುಗಳ ಕಾಲ ರಕ್ಷಣೆ ನೀಡಬಲ್ಲುದು ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಜನರು ಕೊರೋನಾ ಸಾಂಕ್ರಾಮಿಕ ರೋಗವು ಮುಗಿದ ಅಧ್ಯಾಯವೆಂದು ಭಾವಿಸಿದ್ದಾರೆ. ಯಾವುದೇ ಭಯವಿಲ್ಲದೇ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ. ಇದುವೇ ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಗುಲೇರಿಯಾ ಅಭಿಪ್ರಾಯ ಪಟ್ಟಿದ್ದಾರೆ.
ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಅನಿವಾರ್ಯ ಕಾರಣಗಳಿಗಾಗಿಯಲ್ಲದೇ ಸುತ್ತಾಡದಿರುವುದು ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಸಲಹೆ ನೀಡಿದ್ದಾರೆ. ಐಪಿಎಸ್ ಸಂಘ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.