ಕೊರೋನಾ ಲಸಿಕೆಯ ವಿರುದ್ಧ ಮಾತನಾಡಿದರೆ ಪ್ರಧಾನಿ ಮೋದಿಯ ವಿರುದ್ಧ ಮಾತನಾಡಿದಂತೆ – ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ: ಕೊರೋನಾ ಲಸಿಕೆಯ ವಿರುದ್ಧ ಮಾತನಾಡಿದರೆ ಪ್ರಧಾನಿ ಮೋದಿಯ ವಿರುದ್ಧ ಮಾತನಾಡಿದಂತೆ ಎಂದು ಬಿಜೆಪಿ ಅಭ್ಯರ್ಥಿಯೊಬ್ಬರು ವಾದಿಸಿದ್ದಾರೆ.

ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದೇ ನಮಗಿರುವ ಏಕೈಕ ದಾರಿ. ಕೊರೋನಾ ಲಸಿಕೆಯು ಪ್ರಧಾನಿ ಮೋದಿ ಲಸಿಕೆ. ಕೊರೋನಾ ಲಸಿಕೆಯನ್ನು ವಿರೋಧಿಸಿದರೆ ಪ್ರಧಾನಿ ಮೋದಿಯನ್ನು ವಿರೋಧಿಸಿದಂತೆ ಎಂದು ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಹೇಳಿದ್ದಾರೆ.

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನರಿಂದ ಆಯ್ಕೆಯಾಗಿ ಬಂದವರು. ಅವರ ವಿರುದ್ಧ ಮಾತನಾಡಿದರೆ ಪ್ರಜಾಪ್ರಭುತ್ವ ಸಿದ್ಧಾಂತದ ವಿರುದ್ಧ ಮಾತನಾಡಿದಂತೆ ಎಂದು ಇದೇ ಸಂದರ್ಭದಲ್ಲಿ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು