ಕೊರೊನಾ ಲಸಿಕೆ ಕೊರತೆಯಿದ್ದರೂ ಸುಳ್ಳು ಹೇಳುವ ರಾಜ್ಯ ಸರ್ಕಾರಕ್ಕೆ ಕೊಂಚವೂ ಲಜ್ಜೆ ಇದ್ದಂತಿಲ್ಲ : ಕಾಂಗ್ರೆಸ್ ಆರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಅಂತ್ಯಸಂಸ್ಕಾರ ವ್ಯವಸ್ಥೆಯ ಕೊರತೆ,ಬೆಡ್‌ಗಳ ಕೊರತೆ ,ಲಸಿಕೆಗಳ ಕೊರತೆ, ರೆಮಿಡಿಸಿವಿರ್ ಕೊರತೆ ,ವೈದ್ಯರ ಕೊರತೆ,ಆಕ್ಸಿಜನ್ ಕೊರತೆ, ಐಸೋಲೇಶನ್ ಕೇಂದ್ರಗಳ ಕೊರತೆ ಉಂಟಾಗಿದೆ. ಕರೋನಾ ಬಂದು ವರ್ಷವಾಗಿದೆ ಸರ್ಕಾರ ಕಲಿತ ಪಾಠವಾದರೂ ಏನು? ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ‌.

ಈ ಬಗ್ಗೆ ಟ್ವೀಟ್ ಮೂಲಕ ವಾಗ್ದಾಳಿ ಮುಂದುವರಿಸಿದ ರಾಜ್ಯ ಕಾಂಗ್ರೆಸ್ ಬಿಜೆಪಿ ಆಡಳಿತವನ್ನು ಟೀಕಿಸಿದೆ,ಇಂಥ ಪರಿಸ್ಥಿತಿ ಎದುರಾದರೂ ಸರ್ಕಾರ ಮಾಡಿಕೊಂಡ ಸಿದ್ಧತೆಯಾದರೂ ಏನು? ನಿಮ್ಮದು ಬೇಜವಾಬ್ದಾರಿ ಸರ್ಕಾರವಲ್ಲದೆ ಇನ್ನೇನು? ರಾಜ್ಯಾದ್ಯಂತ ಲಸಿಕೆ ಕೊರತೆಯಾಗಿರುವ ವರದಿಗಳು ಪ್ರತಿ ದಿನವೂ ಬರುತ್ತಿವೆ. ಆದರೂ ಆತ್ಮವಂಚನೆಯ ಸುಳ್ಳು ಹೇಳುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೊಂಚವೂ ಲಜ್ಜೆ ಇದ್ದಂತಿಲ್ಲ ಎಂದು ಕಿಡಿಕಾರಿದೆ.

ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸುವ ಅನುಮತಿಯನ್ನು ಕೇಂದ್ರ ಏಕೆ ನೀಡುತ್ತಿಲ್ಲ? ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಏಕೆ ತೋರುತ್ತಿಲ್ಲ ತಾವು? ರಾಜ್ಯ ಬಿಜೆಪಿ ಸರ್ಕಾರ  ಸುಳ್ಳುಗಳನ್ನು ಬಿಟ್ಟು ಸತ್ಯ ಹೇಳಿ.

ಕೇಂದ್ರದಿಂದ ಎಷ್ಟು ಲಸಿಕೆ ತರಿಸಿದ್ದೀರಿ? ರಾಜ್ಯದಲ್ಲಿ ಎಷ್ಟು ಲಸಿಕೆ ದಾಸ್ತಾನಿದೆ? ಇದುವರೆಗೂ ರಾಜ್ಯದಲ್ಲಿ ಲಸಿಕೆ ನೀಡುವಿಕೆಯ ಪ್ರಗತಿ ಎಷ್ಟು?ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಲಸಿಕೆ ನೀಡಲಾಗಿದೆ? ಲಸಿಕೆ ಇಲ್ಲವೆಂದು ಜನ ವಾಪಸ್ ತೆರಳುತ್ತಿರುವುದೇಕೆ? ಎಂಬುದು ರಾಜ್ಯದ ಜನತೆಗೆ ಮಾಹಿತಿ ಕೊಡಿ” ಎಂದು ಕಾಂಗ್ರೆಸ್ ಆಗ್ರಹಿಸಿದೆ.

 

ರಾಜ್ಯದಲ್ಲಿ ಲಸಿಕೆ ಕೊರತೆಯಾಗಿರುವ ಹಿಂದೆಯೇ ಸೋಂಕಿತರ ಚಿಕಿತ್ಸೆಗೆ ಅತ್ಯಗತ್ಯವಾದ ರೆಮಿಡಿಸಿವಿರ್ ಔಷಧದ ಕೊರತೆ ಉಂಟಾಗಿದೆ.ಕಾಳಸಂತೆಯಲ್ಲಿ 15 ರಿಂದ 20 ಸಾವಿರ ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ. ರೆಮಿಡಿಸಿವಿರ್ ಕೊರತೆ ನೀಗಿಸಲು, ಕಾಳಸಂತೆ ಹಾವಳಿ ತಪ್ಪಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ? ಎಂದು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವರಿಗೆ ಕಾಂಗ್ರೆಸ್ ಪ್ರಶ್ನಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು