ಭೋಪಾಲ್: ಮಧ್ಯಪ್ರದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಜಧಾನಿ ಭೋಪಾಲಿನಲ್ಲೂ, ವಾಣಿಜ್ಯ ನಗರಿ ಇಂಧೋರಿನಲ್ಲೂ ರಾತ್ರಿ ಕರ್ಪ್ಯೂ ಜಾರಿ ಮಾಡಲಾಗಿದೆ. ಜೊತಗೆ ಕೊರೋನಾ ಪ್ರಕರಣಗಳು ಕಂಡುಬಂದಇನ್ನೂ ಎಂಟು ನಗರಗಳಲ್ಲೂ ರಾತ್ರಿ ಸಮಯದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲು ನಿರ್ದೇಶನ ನೀಡಲಾಗಿದೆ. ಹತ್ತಿರದ ಮಹಾರಾಷ್ಟ್ರದಲ್ಲಿ ಕೋವಿಡ್ ಮಹಾಮಾರಿಯು ಏರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ಆದೇಶ ನೀಡಲಾಗಿದೆಯೆಂದು ವರದಿಯಾಗಿದೆ.
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ತರ್ಮಲ್ ಸ್ಕ್ಯಾನಿಂಗ್ ಹಾಗೂ ಏಳು ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಿ, ಆದೇಶ ನೀಡಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಚೌಹಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈತೀರ್ಮಾನ ಕೈಗೊಳ್ಳಲಾಗಿದೆ.
ಜಬಲ್ಪುರ್, ಗ್ವಾಲಿಯರ್, ಉಜ್ಜೈನ್, ರತ್ಲಮ್, ಬರ್ಹಾನ್ಪುರ್, ಚಿಂದ್ವಾರ್, ಬೆತುಲ್, ಖಾರ್ಗೋನ್ ಮುಂತಾದ ನಗರಗಳಲ್ಲಿರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಮುಂದಿನ ಮೂರು ದಿನಗಳಲ್ಲೂ ಕೊರೋನಾ ಪ್ರಕರಣಗಳಲ್ಲಿ ಏರಿಕೆ ಕಂಡುಬರಲಿದೆಯೆಂದು ಅಂದಾಜಿಸಲಾಗಿದೆ
ಐವರು ಶಾಸಕರೂ ಸೇರಿದಂತೆ ಹಲವು ಅಧಿಕಾರಿಗಳಿಗೆ ಕರೋನಾ ತಗುಲಿದ ಕಾರಣದಿಂದ ಮಾರ್ಚ್ ಇಪ್ಪತ್ತಾರರಂದು ನಡೆಯಬೇಕಿದ್ದ ರಾಜ್ಯ ಬಜೆಟ್ ಅಧಿವೇಶನವನ್ನು ಮುಂದೂಡಲಾಗಿತ್ತು. ನಿನ್ನೆಯ ಒಂದೇ ದಿನದಲ್ಲಿ ಎಂಟು ನೂರಕ್ಕೂ ಹೆಚ್ಚು ಮಂದಿಗೆ ಕೊರೋನಾ ತಗುಲಿದೆ. ಜನರು ಕೋರೋನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮುಖ್ಯಮಂತ್ರಿಯು ಕರೆ ನೀಡಿದ್ದಾರೆ.