ಕೊರೋನಾ ಎಂಬ ಜೀವಿಗೂ ಬದುಕುವ ಹಕ್ಕಿದೆ! – ಬಿಜೆಪಿ ಮುಖಂಡ, ಉತ್ತರಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ರಾವತ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಡೆಹ್ರಾಡೂನ್: ಅಸಂಬಂದ್ಧ ಹೇಳಿಕೆಗಳಿಂದಲೇ ಕುಖ್ಯಾತಿ ಪಡೆಯುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಬಾರಿ ಹೇಳಿಕೆ ನೀಡಿದವರು ಉತ್ತರಖಂಡದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಬಿಜೆಪಿ ನಾಯಕ ತ್ರಿವೇಂದ್ರ ಸಿಂಗ್ ರಾವತ್.

ಕೊರೋನಾ ಕೂಡಾ ಒಂದು ಜೀವಿಯಾಗಿದೆ. ನಾವೂ ಕೂಡಾ ಒಂದು ಜೀವಿ. ನಾವೇ ಬುದ್ಧಿವಂತರೆಂದು ತಿಳಿದಿದ್ದೇವೆ. ಅದೂ ಬದುಕಲು ಬಯಸುತ್ತದೆ. ಅದಕ್ಕೂ ಬದುಕುವ ಹಕ್ಕಿದೆ. ಬದುಕುವುದಕ್ಕಾಗಿಯೇ ಅದು ರೂಪಾಂತರಗೊಳ್ಳುತ್ತಿದೆ.” ಎಂದು ಹೇಳಿಕೆ ನೀಡಿದ್ದಾರೆ. ರಾವತ್ ಹೇಳಿಕೆ ಮಿಂಚಿನಂತೆ ವೈರಲಾಗಿದೆ.

ಈಗಾಗಲೇ ಕೋವಿಡ್ ವಿರುದ್ಧದ ಹೋರಾಟದಲ್ಲಿ ಬೇಜವಾಬ್ಧಾರಿತನ ಮತ್ತು ನಿರ್ಲಕ್ಷ್ಯ ವಹಿಸಿದೆಯೆಂಬ ಆರೋಪವು ಕೇಂದ್ರದ ಬಿಜೆಪಿ ಸರಕಾರದ ಮೇಲಿದೆ. ಎರಡನೇ ಅಲೆಯಲ್ಲಿ ಭಾರತದಾದ್ಯಂತ ಕೋವಿಡ್ ಪ್ರಕರಣಗಳು ಅನಿಯಂತ್ರಿತವಾಗಿ ಏರುತ್ತಿದೆ. ಜನರು ಆಕ್ಸಿಜನ್, ವೆಂಟಿಲೇಟರ್ ಮುಂತಾದ ವೈದ್ಯಕೀಯ ಸವಲತ್ತುಗಳ ಕೊರತೆಯಿಂದ ಬಳಲುತ್ತಿದ್ದಾರೆ. ಲಸಿಕೆಯೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಲಾಕ್ಡೌನ್ ಕಾರಣದಿಂದ ಬದುಕುವುದಕ್ಕೂ ಕಷ್ಟಪಡಬೇಕಾದ ಸನ್ನಿವೇಶ ಸೃಷ್ಠಿಯಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ವೈರಸಿಗೂ ಬದುಕುವ ಹಕ್ಕಿದೆ ಎಂಬ ಬಿಜೆಪಿ ಮುಖಂಡನ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

‘ಅವರ ಪಕ್ಷವು ಅರ್ಧದಿಂದಲೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವುದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಮಾತನಾಡುತ್ತಿದ್ದಾರೆ.’ ಎಂದು ಉತ್ತರಖಂಡ ಕಾಂಗ್ರೆಸ್ ಮುಖಂಡ ಸೂರ್ಯಕಾಂತ್ ಧಸ್ಮನ ಹೇಳಿದ್ದಾರೆ. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ರಾವತ್ ಸಿಂಗ್ ಹೇಳಿಕೆಯು ಟ್ರೋಲ್ಗೆ ಒಳಗಾಗಿದ್ದು ಹಾಸ್ಯ ಭರಿತವಾದ ಟೀಕೆಗಳು ಬಂದಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು