ಕೊರೊನಾ ಭಯದ ಘಟನೆ ಓದಿ : ರೂಮ್ ನಲ್ಲಿ ಹೆಣ, ಹಾಲ್ ನಲ್ಲಿ ಹೆಂಡತಿ, ಹೊರಗಡೆ ಕಾರಿನಲ್ಲಿ ಬಾಮೈದ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊರೊನಾ ಎರಡನೇ ಅಲೆಗೆ ಇಡೀ ದೇಶವೇ ನಲುಗಿದೆ. ಇದು ಕರ್ನಾಟಕ ರಾಜ್ಯಕ್ಕೂ ವಕ್ಕರಿಸಿ ಜನ ತತ್ತರಿಸುವಂತೆ ಮಾಡಿದೆ. ಬಡ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದೆ ಸಂಕಟ ಅನುಭವಿಸುತ್ತಿರುವ ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರು ಅದೆಷ್ಟು ಲೆಕ್ಕವಿಲ್ಲ. ಎಷ್ಟೇ ಆಸ್ತಿ ಅಂತಸ್ತು ಅಧಿಕಾರ ಇದ್ದರೂ ಕೊನೆಗೆ ಒಡ ಹುಟ್ಟಿದವರು ಇಲ್ಲದೇ ಅನಾಥವಾಗಿ ಮಣ್ಣಿಗೆ ಸೇರುವ ಭಯಾನಕ ಪರಿಸ್ಥಿತಿ ಕೋವಿಡ್ ತಂದೊಡ್ಡಿದೆ. ಇಂಥ ಒಂದು ಹೃದಯ ಕಲಕುವ ಘಟನೆಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿದ್ದಾರೆ. ಓದಿ

ನಿನ್ನೆ ನಡೆದ ಘಟನೆಯಿದು.

ಕನಕಪುರ ರಸ್ತೆಯ ತಲಗಟ್ಟಪುರ ಹತ್ತಿರದ ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ವಾಸವಾಗಿದ್ದರು.
ಅದರಲ್ಲಿ ಗಂಡನಿಗೆ ಕೋವಿಡ್ ಬಂದು ತೀರಿ ಹೋಗಿದ್ದಾರೆ. ಅಂತ್ಯಸಂಸ್ಕಾರ ಮಾಡಲು ಯಾರು ಇಲ್ಲ.

ಈ ಮಾಹಿತಿಯನ್ನು ನನ್ನ ಪತ್ರಕರ್ತ ಗೆಳೆಯರೊಬ್ಬರು ನನಗೆ ತಿಳಿಸಿದರು.

ತಕ್ಷಣವೇ ರಾಜಾಜಿನಗರದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಮಾಡಿ ವಿಷಯ ತಿಳಿಸಿ ಅಗತ್ಯ ನೆರವು ನೀಡಲು ತಿಳಿಸಿದೆ.

ನಮ್ಮ ಕಾರ್ಯಕರ್ತರು ವಿಚಾರಿಸಿದಾಗ ಆ ವ್ಯಕ್ತಿಗೆ ಜ್ವರ ಬಂದ ಕಾರಣ ಸ್ಥಳೀಯ ಆಸ್ಪತ್ರೆಗೆ ಕಳೆದ ವಾರ ಹೋಗಿ ಪರೀಕ್ಷೆ ಮಾಡಿಸಿರುವ ವಿಚಾರ ತಿಳಿದುಬಂದಿದೆ. ಅಲ್ಲಿ ಅವರಿಗೆ ಕೋವಿಡ್ ಪಾಸಿವಿಟ್ ಎಂದು ತಿಳಿಯುತ್ತದೆ. ಅವರು ನೇರವಾಗಿ ಮನೆಗೆ ಬಂದು ಕೋಣೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗುತ್ತಾರೆ.

ಮೊನ್ನೆ ಸಂಜೆ ಅವರ ಹೆಂಡತಿ ಕೋಣೆಗೆ ಹೋಗಿ ನೋಡಿದರೆ ಗಂಡ ಮರಣ ಹೊಂದಿರುವುದು ತಿಳಿಯುತ್ತದೆ. ಇದರಿಂದ ಹೆಂಡತಿಯು ಗಾಬರಿಯಾಗಿ ಏನು ಮಾಡಬೇಕೆಂದು ತಿಳಿಯದೆ ದಿಗ್ಬ್ರಮೆಯಾಗುತ್ತದೆ. ನಂತರ ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿದು ಅವರು ಮೈಸೂರಿನಲ್ಲಿರುವ ಗಂಡನ ಬಾಮೈದನಿಗೆ ಕರೆ ಮಾಡಿ ತಿಳಿಸುತ್ತಾರೆ.

ಮೈಸೂರಿನಿಂದ ಕಾರಿನಲ್ಲಿ ಬಂದ ಅವರು ಕೊರೋನಾ ಕಾರಣದಿಂದ ಮನೆಯ ಒಳಗೆ ಹೋಗದೆ ಹೊರಗಡೆ ಕಾರಿನಲ್ಲೇ ರಾತ್ರಿ ಪೂರ್ತಿ ಮಲಗುತ್ತಾರೆ. ಒಂದು ಕಡೆ ರೂಮ್ ನಲ್ಲಿ ಹೆಣ, ಹಾಲ್ ನಲ್ಲಿ ಹೆಂಡತಿ, ಹೊರಗಡೆ ಕಾರಿನಲ್ಲಿ ಬಾಮೈದ….. ಯಾರಿಗೂ ಮುಂದೆ ಏನು ಮಾಡಬೇಕೆಂದು ತಿಳಿದಿಲ್ಲ.

16-04-2021 ಶುಕ್ರವಾರ,

ನಿನ್ನೆ ನಮ್ಮ ರಾಜಾಜಿನಗರ ಕಾರ್ಯಕರ್ತರು ಸ್ಥಳೀಯ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಕೆಂಗೇರಿಯ ಚಿತಗಾರದಲ್ಲಿ ಶವದ ಅಂತಿಮ ಕಾರ್ಯಕ್ಕೆ ವ್ಯವಸ್ಥೆ ಮಾಡಿ ಮುಗಿಸಿದರು.

ಅಲ್ಲಿ ಶವದ ಪರವಾಗಿ ಅವರ ಒಬ್ಬ ಸಂಬಂಧಿ ಬಿಟ್ಟು ಯಾರು ಸಹ ಇರಲಿಲ್ಲ. ಅವರು ಶವದ ಹತ್ತಿರವಿರಲಿ,ಅದರ ವಾಹನ ಹತ್ತಿರ ಬರಲು ಹೆದರುತ್ತಿದ್ದರು. ಮೃತದೇಹದ ಪೂಜಾಕಾರ್ಯಯೂ ಮಾಡಲಿಲ್ಲ. ಅಂತಿಮವಾಗಿ ನಮ್ಮ ಕಾರ್ಯಕರ್ತರೆ ಅಂತಿಮ ಸಂಸ್ಕಾರ ಮಾಡಿ ಬಂದರು.

ದೈರ್ಯದಿಂದ ಅಂತ್ಯಸಂಸ್ಕಾರ ಮಾಡಿದ ತಮ್ಮ ಕಾರ್ಯಕರ್ತರಿಗೆ ನಮನಗಳು ಸಲ್ಲಿಸಿದ್ದಾರೆ. ಸುರೇಶ್ ಕುಮಾರ್ ಅವರ ಈ ಪೋಸ್ಟ್ ಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು