ಕೊರೋನಾ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ | ರೋಗಿಗಳು ಗಂಭೀರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭೋಪಾಲ್(21-11-2020): ಕೊರೋನಾ ರೋಗಿಗಳಿರುವ ಆಸ್ಪತ್ರೆಗೆ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿದೆ. ಪರಿಣಾಮವಾಗಿ ಎರಡು ರೋಗಿಗಳಿಗೆ ಗಂಭೀರ ಗಾಯಗಳಾಗಿವೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ. ಗ್ವಾಲಿಯರ್ ಸೂಪರ್ ಸ್ಪೆಷಾಲಿಟಿ ಜಯ್ರೋಗ್ಯ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿರುವುದು.

ಮೂರನೇ ಮಹಡಿಯಲ್ಲಿದ್ದ ತುರ್ತು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾರ್ಡಿನಲ್ಲಿದ್ದ ಇತರ ರೋಗಿಗಳನ್ನು ಇನ್ನೊಂದು ಕೋಣೆಗೆ ಸ್ಥಳಾಂತರಿಸಲಾಯಿತು. ಆ ವೇಳೆಗಾಗಲೇ ಎರಡು ರೋಗಿಗಳಿಗೆ ಬೆಂಕಿ ತಗುಲಿಯಾಗಿತ್ತು. ಐಸಿಯು ವಿಭಾಗದಲ್ಲಿ ಉಂಟಾದ ಶಾರ್ಟ್‌ ಸರ್ಕ್ಯುಟ್ ಈ ಅನಾಹುತಕ್ಕೆ ಕಾರಣವೆಂದು ತಿಳಿದು ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು