ಹದಿನೈದು ವರ್ಷದ ಹಿಂದೆ ಇಸ್ಲಾಂ ಸ್ವೀಕರಿಸಿದ್ದ ವ್ಯಕ್ತಿ ಮತ್ತೆ ಹಿಂದೂ ಧರ್ಮಕ್ಕೆ ‘ಘರ್ ವಾಪಸಿ’

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಿಹಾರದ ಸಮಸ್ತಿಪುರದಲ್ಲಿ ಹದಿನೈದು ವರ್ಷಗಳ ಹಿಂದೆ ಹಿಂದೂ ಧರ್ಮ ತೊರೆದ ವ್ಯಕ್ತಿಯೊಬ್ಬ ‘ಘರ್ ವಾಪಸಿ’ ಯಾದ ಘಟನೆ ನಡೆದಿದೆ. ಹಿಂದೂ ಧರ್ಮ ಬಿಟ್ಟು ಇಸ್ಲಾಂಗೆ ಸೇರ್ಪಡೆಗೊಂಡಿದ್ದ ಈ ಯುವಕ ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ.

ಮತ್ತೆ ಹಿಂದೂ ಧರ್ಮಕ್ಕೆ ಬಂದ ಈತನ ಹೆಸರು ಮೊಹಮ್ಮದ್ ಅಬ್ದುಲ್ಲಾ. ಅಬ್ದುಲ್ಲಾ ಗ್ರಾಮದ ವ್ಯಕ್ತಿಯೊಂದಿಗೆ ಜಗಳವಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿ ಪಂಚಾಯತಿ ಸಭೆ ನಡೆಸಿ ಅವರ ಮೇಲೆ ಆರೋಪ ಮಾಡಿ ಅವರ ವಿರುದ್ಧ ತೀರ್ಪು ನೀಡಿರುವುದರಿಂದ ಅವರಿಗೆ ನೋವಾದ ಕಾರಣ ಅವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ.

ಪಂಚಾಯತಿಯ ನಿರ್ಧಾರದಿಂದ ಮನನೊಂದು ಧರ್ಮ ಬದಲಾಯಿಸಲು ನಿರ್ಧರಿಸಿದ್ದಾನೆ. ಹೀಗೆ 15 ವರ್ಷಗಳ ನಂತರ ಮತ್ತೆ ಹಿಂದೂ ಧರ್ಮ ಸ್ವೀಕರಿಸಿ ಅಬ್ದುಲ್ಲಾನಿಂದ ಉಮೇಶನಾಗದ್ದಾನೆ. ಯುವಕನ ಘರ್‌ ವಾಪಸಿಯನ್ನು ಸ್ಥಳೀಯ ಬಿಜೆಪಿ ಶಾಸಕ ವೀರೇಂದ್ರ ಕುಮಾರ್ ಸ್ವಾಗತಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು