ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ವಲಸೆ ನಾಯಕ ಅಷ್ಟೇ : ಬಿಜೆಪಿ ಟೀಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ನೀವು ಮುಖ್ಯಮಂತ್ರಿ ಆಗಿದ್ದಾಗ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ತಮ್ಮನ್ನು ಹೋದಲ್ಲಿ ಬಂದಲ್ಲಿ ಟೀಕೆ ಮಾಡುತ್ತಿದ್ದರು.
ಅವರನ್ನು ನಿಯಂತ್ರಿಸಲಾಗದ ನೀವು ಈಗ ಬಿಜೆಪಿ ಪಕ್ಷದ ಬಗ್ಗೆ ಚಿಂತಿಸುವುದು ಹಾಸ್ಯದ ವಿಚಾರ ಎಂದು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.

ಯತ್ನಾಳ್ ಮತ್ತು ಈಶ್ವರಪ್ಪ ನವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗದ ನಳೀನ್ ಕುಮಾರ್ ಅಸಮರ್ಥ ನಾಯಕ ಎಂದು ಟ್ವೀಟ್ ಮಾಡಿದ ಸಿದ್ದರಾಮಯ್ಯ ನವರ ವಿರುದ್ಧ ಸರಣಿ ಟ್ವೀಟ್ ಮುಂದುವರೆಸಿದ ಬಿಜೆಪಿ “ಕಾಂಗ್ರೆಸ್‌ ಪಕ್ಷದಲ್ಲಿ ನೀವೊಬ್ಬ ವಲಸೆ ನಾಯಕ ಸಿದ್ದರಾಮಯ್ಯ ಅಷ್ಟೇ! ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಅವರಿಗೆ ಅನ್ಯಾಯವಾದಾಗ ಧ್ವನಿ ಎತ್ತಲಾಗದ ನೀವು ನಿಜವಾದ ಅಸಮರ್ಥ ನಾಯಕ. ನಿಮ್ಮ ಅಸಮರ್ಥತೆಯನ್ನು ಮುಚ್ಚಿಟ್ಟುಕೊಂಡು ಬೇರೆಯವರ ಸಮರ್ಥತೆಯ ಬಗ್ಗೆ ಪ್ರಶ್ನಿಸುವುದು ನಿಮಗೆ ಶೋಭೆ ತರುವುದಿಲ್ಲ” ಎಂದು ಬಿಜೆಪಿ ಆರೋಪಿಸಿದೆ‌.

“ಪರಮೇಶ್ವರ್ ಗೆದ್ದರೆ ತಾನು ಸಿಎಂ ಆಗುವ ಕನಸಿಗೆ ಕುತ್ತು ಬರುತ್ತದೆ ಎಂದು ಬಲಪ್ರಯೋಗಿಸಿ ಪರಮೇಶ್ವರ್ ಅವರನ್ನು ಸೋಲಿಸಿದಿರಿ,
ತನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಮೂಕ ಪ್ರೇಕ್ಷಕನನ್ನಾಗಿ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು. ವಿಧಾನಸೌಧ – ವಿಕಾಸ ಸೌಧದ ಮಧ್ಯೆ ಸಿದ್ದರಾಮಯ್ಯ ಸರ್ಕಾರ ನಿದ್ದೆ ಹೊಡೆಯುತ್ತಿದೆ ಎಂದು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ತಿವಿದಿದ್ದರು. ಈ ಹೇಳಿಕೆಯನ್ನು ಸಿದ್ದರಾಮಯ್ಯ ಮರೆತಿರಬಹುದು, ಆದರೆ ರಾಜ್ಯದ ಜನತೆ ಮರೆತಿಲ್ಲ” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

“ನಿಮ್ಮ ಅಸಮರ್ಥತೆಯನ್ನು ಸಾರ್ವಜನಿಕ ವೇದಿಕೆಯಲ್ಲೇ ಸ್ಪೀಕರ್‌ ತೆರೆದಿಟ್ಟಿದ್ದರು.
ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ದು ನಿಮ್ಮ ಅಸಮರ್ಥತೆಯಿಂದಲ್ಲವೇ? ಬಾದಾಮಿಯಲ್ಲಿ ಮುಂದಿನ ಬಾರಿ ಸೋಲುವ ಭಯದಿಂದ ಮೂರನೇ ಕ್ಷೇತ್ರದ ಹುಡುಕಾಟದಲ್ಲಿರುವುದು ನಿಮ್ಮ ಅಸಮರ್ಥತೆಯಲ್ಲವೇ? ಸಮರ್ಥ & ಅಸಮರ್ಥ ಎನ್ನುವ ಹೋರಾಟ ಇರುವುದು ಡಿ.ಕೆ.ಶಿವಕುಮಾರ್ ಮತ್ತು ನಿಮ್ಮ ನಡುವೆಯೇ ಹೊರತು ಬಿಜೆಪಿಯಲ್ಲಲ್ಲ” ಎಂದು ಸಿದ್ದರಾಮಯ್ಯ ನವರಿಗೆ ಬಿಜೆಪಿ ಟೀಕಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು