ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೊರೊನಾ ಸೋಂಕು

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಇಡೀ ದೇಶ ತತ್ತರಿಸಿದೆ. ದೇಶದ ವಿವಿಧ ಪಕ್ಷಗಳ ಮುಖಂಡರಿಗೆ, ಮುಖ್ಯಮಂತ್ರಿಗಳಿಗೆ, ನಟ, ಕಲಾವಿದರಿಗೆ, ಸೇರಿದಂತೆ ಯಾರಿಗೂ ಬಿಡದೇ ಕೊರೊನಾ ಮಹಾಮಾರಿ ಕಾಡುತ್ತಿದೆ. ಈಗ
ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಗೆ ಕರೋನ ಸೋಂಕು ಧೃಡಪಟ್ಟಿದ್ದು, ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

‘ನನಗೆ ಕೋವಿಡ್ ಸೋಂಕು ರೋಗದ ಲಕ್ಷಣಗಳನ್ನು ಕಾಣಿಸಿದ ನಂತರ, ಕರೋನ ಸೊಂಕು ಇರೋದು ಪತ್ತೆಯಾಗಿದ್ದು, ಇತ್ತೀಚೆಗೆ ನನ್ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರೂ, ದಯವಿಟ್ಟು ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನಿನ್ನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರು ಚಿಕಿತ್ಸೆಗಾಗಿ ನಿನ್ನೆಯಿಂದ ಆಸ್ಪತ್ರೆಯಲ್ಲಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು