ಬಿಹಾರ ವಿಧಾನಸಭಾ ಚುನಾವಣೆ: ಟೀಕೆಗಳ ಸುರಿಮಳೆಗೆ ಉತ್ತರ ನೀಡಿತು ಕಾಂಗ್ರೆಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(11-11-2020): ಬಿಹಾರ ಚುನಾವಣೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ ಕಾಂಗ್ರೆಸ್ಸಿಗೆ ಬಹಳಷ್ಟು ಟೀಕೆಗಳನ್ನು ಕೇಳಬೇಕಾಗಿ ಬಂದಿದೆ. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದೆ. ಮಹಾಮೈತ್ರಿಯ ಭಾಗವಾದ ತನಗೆ, ಸ್ಪರ್ಧಿಸಲು ನೀಡಲಾದ ಕ್ಷೇತ್ರಗಳು ಸೋಲುಣ್ಣಿಸುವ ಕ್ಷೇತ್ರಗಳಾಗಿದ್ದವು ಎಂದಿದೆ.

ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಬರೇ 19 ಕ್ಷೇತ್ರಗಳಲ್ಲಷ್ಟೇ ಜಯ ಸಾಧಿಸಿದೆ. ಕಾಂಗ್ರೆಸ್ ಬಹುಮುಖ್ಯ ಮೈತ್ರಿ ಪಕ್ಷಗಳಲ್ಲಿ ಒಂದಾಗಿದ್ದರೂ, ಅತಿ ಕಡಿಮೆ ಸ್ಥಳಗಳಲ್ಲಿ ಜಯಗಳಿಸಿದ ಪಕ್ಷವಾಗಿದೆ. 70ರಲ್ಲಿ ಸುಮಾರು 45ರಷ್ಟು ಎನ್‌ಡಿಎ ಭದ್ರಕೋಟೆಗಳಾಗಿದ್ದವು. ಇಂತಹ ಸ್ಥಳಗಳಲ್ಲಿ ನಮಗೆ ಸ್ಪರ್ಧಿಸಲು ಅವಕಾಶ ನೀಡಿರುವುದೇ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಜಯಗಳಿಸಲು ಕಾರಣವಾಗಿದೆಯೆಂದು ಕಾಂಗ್ರೆಸ್ಸಿನ ಹಿರಿಯ ನಾಯಕರು ಹೇಳಿದ್ದಾರೆ.

ಸುಧೀರ್ಘ ಚರ್ಚೆಗಳ ಬಳಿಕ ಆರ್‌ಜೆಡಿಯು ಮೂವತ್ತು ಕ್ಷೇತ್ರಗಳನ್ನು ಜಾಸ್ತಿ ಮಾಡಿ ನಮಗೆ ಬಿಟ್ಟು ಕೊಟ್ಟಿತು. ಒಟ್ಟು ಎಪ್ಪತ್ತು ಸೀಟುಗಳು ಸಿಕ್ಕಿದೆ. ಇದು ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೂ ಸಹಾ ಇದರಿಂದ ಕಾಂಗ್ರೆಸ್ಸಿಗೆ ಯಾವುದೇ ಲಾಭವಿಲ್ಲ ಎಂದು ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರು ಮೊದಲೇ ತಗಾದೆ ತೆಗೆದಿದ್ದರು.

ಸುಮಾರು ಇಪ್ಪತ್ತು ವರ್ಷಗಳಿಂದಲೂ ಸ್ವತಃ ಆರ್‌ಜೆಡಿಗೇ ಗೆಲ್ಲಲಾಗದೇ ಇರುವ ಪ್ರದೇಶಗಳನ್ನು ಆರ್‌ಜೆಡಿ ನಮಗೆ ಕೊಟ್ಟರೆ, ಕಾಂಗ್ರೆಸ್ ಹಿಡಿತವಿದ್ದ ಸ್ಥಳಗಳಲ್ಲಿ ಎಡಪಕ್ಷಗಳಿಗೆ ಸ್ಪರ್ಧಿಸಲು ಅನುವು ಮಾಡಿಕೊಟ್ಟಿವೆಯೆಂದು ಕಾಂಗ್ರೆಸ್ಸಿನ ಆರೋಪ. ಆದರೆ ಕಾಂಗ್ರೆಸ್ ನೇತೃತ್ವವು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎನ್ನುವುದು ಕಾಂಗ್ರೆಸ್ಸಿನೊಳಗಿನ ಇನ್ನು ಕೆಲವು ನಾಯಕರ ಮತ್ತು ಕಾರ್ಯಕರ್ತರ ಅನಿಸಿಕೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು