ಹಗಲು ಹಣ ಸಂಗ್ರಹಿಸಿ ರಾತ್ರಿ ಕುಡಿದು ಬೀಳುತ್ತಾರೆ| ರಾಮಮಂದಿರ ವಿಚಾರದಲ್ಲಿ ಬಿಜೆಪಿ ಆರೆಸ್ಸೆಸ್ಸಿಗರ ವಿರುದ್ಧ ಗಂಭೀರ ಆರೋಪ!

buriya
Share on facebook
Share on twitter
Share on linkedin
Share on whatsapp
Share on telegram
Share on email
Share on print

ಭೋಪಾಲ್(03-02-2021): ಬಿಜೆಪಿ ನಾಯಕರು ಹಗಲಿನಲ್ಲಿ ರಾಮಮಂದಿರದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಾರೆ, ರಾತ್ರಿ ಕುಡಿದು ಬಾರ್ ನಲ್ಲಿ ಬೀಳುತ್ತಾರೆ ಎಂದು ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕಾಂತಿಲಾಲ್ ಭುರಿಯಾ ಹೇಳಿದ್ದಾರೆ.

 ರಾಮಮಂದಿರದ ಹೆಸರಿನಲ್ಲಿ ಸಂಗ್ರಹಿಸಿದ ಹಣದಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ ಭುರಿಯಾ, ಬಿಜೆಪಿ ನಾಯಕರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೋಟಿ ಕೋಟಿ ರೂ.ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಈ ನಾಯಕರು ಬೇರೇನೂ ಮಾಡುತ್ತಿಲ್ಲ. ಬೆಳಗ್ಗೆಯೆಲ್ಲ ಹಣ ಸಂಗ್ರಹ ಮಾಡಿ, ರಾತ್ರಿ ಕುಡಿದು ಹಣವನ್ನು  ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ರಾಷ್ಟ್ರಾದ್ಯಂತ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಜವಾಬ್ದಾರಿಯನ್ನು ಆರ್​ಎಸ್​ಎಸ್​, ವಿಶ್ವ ಹಿಂದೂ ಪರಿಷತ್​ ಸೇರಿ ಹಲವು ಸಂಘಟನೆಗಳಿಗೆ ವಹಿಸಿತ್ತು. ಇದೀಗ ಸಂಗ್ರಹಿತ ಹಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಕೈ ಶಾಸಕರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು