ತಿರುವನಂತಪುರಂ (12-11-2020): ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮರ ಬಿದ್ದು ಸಾವನ್ನಪ್ಪಿದ್ದಾರೆ.
42 ವರ್ಷದ ಆರ್ ಗಿರಿಜಾ ಕುಮಾರಿ ಅವರು ಪರಸ್ಸಲಾದ ಉಚಕ್ಕಾ ಮೂಲದವರಾಗಿದ್ದು, ಕರೋಡೆ ಪಂಚಾಯತ್ನ ಪುತಿಯ ಉಚಕ್ಕಡ ವಾರ್ಡ್ನಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸುತ್ತಿದ್ದರು.
ಗಿರಿಜಾ ಕುಮಾರಿ ಅವರು ಆರು ವರ್ಷಗಳ ಕಾಲ ಕರೋಡೆ ಪಂಚಾಯತ್ನಲ್ಲಿರುವ ಕುಡುಂಬಶ್ರೀ ಸಮುದಾಯ ಅಭಿವೃದ್ಧಿ ಸೊಸೈಟಿಯಲ್ಲಿದ್ದರು. ತನ್ನ ಟಿಕೆಟ್ ನ್ನು ಪಕ್ಷವು ದೃಢಪಡಿಸಿದಾಗ ಅವರು ಎರಡು ದಿನಗಳ ಹಿಂದೆಯಷ್ಟೇ ಪ್ರಚಾರವನ್ನು ಪ್ರಾರಂಭಿಸಿದ್ದರು.
ಮೃತ ಗಿರಿಜಾ ಪತಿ ಬಿನುನಾಥ್ ಮತ್ತು ಮಕ್ಕಳಾದ ಬಿಂದುಜಾ ಜಿ ನಾಥ್ ಮತ್ತು ಅಂಜುಜಾ ಜಿ ನಾಥ್ ಅವರನ್ನು ಅಗಲಿದ್ದಾರೆ. ಗಿರಿಜಾ ಸಾವಿಗೆ ಸಂಬಂಧಿಸಿದಂತೆ ಪೋಝಿಯೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.