ಕಂಪ್ಯೂಟರ್ ಬಾಬಾ ಬಂಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಂದೋರ್(13-11-2020): ಸರಕಾರೀ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಸ್ವಯಂ ಘೋಷಿತ ದೇವಮಾನವ ಕಂಪ್ಯೂಟರ್ ಬಾಬಾನನ್ನು ಅರೆಸ್ಟ್ ಮಾಡಲಾಗಿದೆ. ಮಧ್ಯ ಪ್ರದೇಶದ ಇಂದೋರಿನಲ್ಲಿರುವ ಸರಕಾರೀ ಜಮೀನಿನಲ್ಲಿ ಬಾಬಾ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದರು. ಇವುಗಳನ್ನು ಸರಕಾರೀ ಅಧಿಕಾರಿಗಳು ನೆಲಸಮಗೊಳಿಸುತ್ತಿದ್ದ ವೇಳೆ‌ ಕಂಪ್ಯೂಟರ್ ಬಾಬಾ ಮತ್ತು ಆತನ ಬೆಂಬಲಿಗರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದ ವಿಚಾರವಾಗಿ ಬಂಧನ ನಡೆದಿರುವುದು.

ನಲ್ವತ್ತು ಎಕರೆಗಳಷ್ಟು ಜಮೀನಿನಲ್ಲಿ ಆಶ್ರಮ ಮಾಡಿಕೊಂಡಿದ್ದ ಕಂಪ್ಯೂಟರ್ ಬಾಬಾ ಎಂದು ಕರೆಯಲಾಗುವ ನಮ್ದೇವೋ ದಾಸ್ ತ್ಯಾಗಿ, ಬಳಿಕ ಅದರ ಸನಿಹದಲ್ಲಿದ್ದ ಎರಡು ಎಕರೆ ಭೂಮಿಯನ್ನೂ ಕಬಳಿಸಿ, ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾರೆನ್ನಲಾಗಿದೆ.

ಅದೇ ವೇಳೆ, ಮಧ್ಯಪ್ರದೇಶದ ಬಿಜೆಪಿ ಸರಕಾರವು ಕಂಪ್ಯೂಟರ್ ಬಾಬಾ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. ಅಲ್ಲದೇ ಕೆಲವು ಕಾಂಗ್ರೆಸ್ಸಿಗರು ಜೈಲಿನಲ್ಲಿ ಬಾಬಾನನ್ನು ಭೇಟಿ ಮಾಡಿ ಬಂದಿದ್ದಾರೆ. ಮೊದಲು ಬಿಜೆಪಿ ಸಚಿವ ಸಂಪುಟದ ಭಾಗವಾಗಿದ್ದ ಬಾಬಾ, ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದರು.

ಬಂಧನದ ವಿರುದ್ಧವಾಗಿ ಬಾಬಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಲಯವು ತಿರಸ್ಕರಿಸಿತ್ತು. ಬಳಿಕ ಬಾಬಾ ಮತ್ತು ಇತರ ಐದು ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು