ತನ್ನನ್ನು ಜಗತ್ತಿಗೆ ಪರಿಚಯಿಸಿದ ಯೂಟ್ಯೂಬರ್ ಮೇಲೆ ಕೇಸ್ ದಾಖಲು ಮಾಡಿದ ‘ಬಾಬಾ ಕಾ ದಾಬಾ” ಮಾಲಕ.. ಏನಿದು ಕೇಸ್ ಓದಿ…

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(02-11-2020): ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಜನಪ್ರಿಯ ಉಪಾಹಾರ ಗೃಹ ‘ಬಾಬಾ ಕಾ ದಾಬಾ’ ಮಾಲೀಕ ಕಾಂತಾ ಪ್ರಸಾದ್ ಅವರು ಇನ್ಸ್ಟಾಗ್ರಾಮ್ ನಲ್ಲಿ ತನ್ನನ್ನು ಜಗತ್ತಿಗೆ ಪರಿಚಯಿಸಿದ ಗೌರವ್ ವಾಸನ್ ವಿರುದ್ಧ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ಕೇಸ್ ದಾಖಲಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾದ್ (80) ಎಂಬ ದಾಬಾ ಮಾಲಕ ಕಣ್ಣೀರಿನಿಂದ ತನ್ನ ಕಷ್ಟಗಳನ್ನು ವಿವರಿಸುವ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಪ್ರಸಾದ್ ಬೆಳಕಿಗೆ ಬಂದಿದ್ದರು.

ಪೊಲೀಸರಿಗೆ ನೀಡಿದ ದೂರಿನಲ್ಲಿ, ಪ್ರಸಾದ್ ಅವರು,  ವಾಸನ್ ಅವರ ವಿಡಿಯೋವನ್ನು ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಉಪಾಹಾರ ಗೃಹ ಮಾಲೀಕರಿಗೆ ಹಣವನ್ನು ದೇಣಿಗೆ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಕೇಳಿದ್ದಾರೆ. ಆದರೆ ಅವರು ವಾಸನ್ ಕುಟುಂಬ / ಸ್ನೇಹಿತರ ಬ್ಯಾಂಕ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಮಾತ್ರ ದಾನಿಗಳೊಂದಿಗೆ ಹಂಚಿಕೊಂಡಿದ್ದಾನೆ. ಆತ ಎಷ್ಟು ಹಣವನ್ನು ಸಂಗ್ರಹಿಸಿದ್ದಾನೆಂಬ ಮಾಹಿತಿ ಇಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು