ಕೋಮುವಾದೀಕರಣಗೊಂಡ ಚುನಾವಣಾ ಪ್ರಚಾರ|  ಇದು ಹೈದರಾಬಾದ್ ಇತಿಹಾಸದಲ್ಲಿ ಮೊದಲು!  

hyderbad election
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೈದರಾಬಾದ್(28-11-2020):  ಈ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಮೇಯರ್ ಹುದ್ದೆಯನ್ನು ಗೆದ್ದರೆ, ಪಾಥಾ ಬಸ್ತಿ (ಓಲ್ಡ್ ಸಿಟಿ)ಯಲ್ಲಿರುವ ರೋಹಿಂಗ್ಯಾಗಳನ್ನು ಮತ್ತು ಪಾಕಿಸ್ತಾನದ ಹೊಲಸು ಜನರನ್ನು ಹೊರಹಾಕುವುದು ಬಿಜೆಪಿಯ ಜವಾಬ್ದಾರಿಯಾಗಿದೆ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಹೇಳಿದರು. ಹೈದರಾಬಾದ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ ‘ಕೋಮು ಕೋಲಾಹಲ’ ಭುಗಿಲೆದ್ದಿದೆ. ಜಿಎಚ್‌ಎಂಸಿ ಚುನಾವಣಾ ಪ್ರಚಾರವನ್ನು ಸಂಪೂರ್ಣವಾಗಿ ಕೋಮುವಾದೀಕರಣಗೊಳಿಸಲಾಗಿದೆ.

ಸಿಎಂ ಕೆಸಿಆರ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಈ ಹಿಂದೆ ಬಂಡಿ ಸಂಜಯ್ ಆರೋಪಿಸಿದ್ದರು ಮತ್ತು ಅವರನ್ನು ನಿಜವಾದ ಹಿಂದೂ ಅಲ್ಲ ಎಂದು ಹಣೆಪಟ್ಟಿ ಕಟ್ಟಿದ್ದರು. ಬಿಜೆಪಿ ಸರ್ಕಾರ ರಚಿಸಿದ ನಂತರ ಓವೈಸಿ ಸಹೋದರರನ್ನು ತನ್ನ ಪಾದರಕ್ಷೆಯಡಿ ತಳ್ಳುತ್ತೇನೆ ಎಂದು ಮತ್ತೊಬ್ಬ ಬಿಜೆಪಿ ಮುಖಂಡ ನಿಜಾಮಾಬಾದ್ ಸಂಸದ ಧರ್ಮಪುರಿ ಅರವಿಂದ್ ಹೇಳಿದ್ದರು. ಮತ್ತೊಂದು ಹೇಳಿಕೆಯಲ್ಲಿ ಕಲ್ವಕುಂಟ್ಲಾ ಕುಟುಂಬ (ಕೆಸಿಆರ್) ‘ಪುರುಷತ್ವವನ್ನು’ ಕಳೆದುಕೊಂಡಿದೆ ಎಂದು ಹೇಳಿದ್ದರು.

ಇನ್ನೊಂದು ಕಡೆ ಕೆಲವು ಅರಾಜಕ ಶಕ್ತಿಗಳು ಹತಾಶೆ ಮತ್ತು ನಿರಾಶೆಯಿಂದ ರಾಜ್ಯದಲ್ಲಿ ಘರ್ಷಣೆ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಉನ್ನತ ಮಟ್ಟದ ಕಾನೂನು ಸುವ್ಯವಸ್ಥೆ ಪರಿಶೀಲನಾ ಸಭೆಯಲ್ಲಿ ತಿಳಿಸಿದ್ದಾರೆ.

ಸಿಎಂ ಕೆಸಿಆರ್ ಮಾತನಾಡಿ ಜಿಎಚ್‌ಎಂಸಿ ಚುನಾವಣೆಯ ಸಮಯದಲ್ಲಿ, ಕೆಲವು ನಾಯಕರು ಹಲವಾರು ಪಿತೂರಿಗಳ ಮೂಲಕ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮೊದಲಿಗೆ ಅವರು ಸೋಶಿಯಲ್ ಮೀಡಿಯಾವನ್ನು ನಕಲಿ ಸುದ್ದಿಗಳನ್ನು ಹರಡಲು ಬಳಸಿದರು. ನಂತರ ಜನರನ್ನು ಫೋಟೋಗಳೊಂದಿಗೆ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರು. ಈಗ ಅವರು ಕೋಮು ಪ್ರಚೋದನೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು