ಹೈದರಾಬಾದ್ (04-12-2020):ಡಿ.1 ರಂದು ನಡೆದ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ರಾಜಕಾರಣಿಗಳಿಗೆ ಪಕ್ಷಪಾತ ತೋರಿದ ಕಾರಣಕ್ಕಾಗಿ 92 ಪೊಲೀಸ್ ಸಿಬ್ಬಂದಿಯನ್ನು ಒಂದೇ ದಿನದಲ್ಲಿ ಅಮಾನತುಗೊಳಿಸಲಾಗಿದೆ ಎಂಬ ವರದಿಯನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ನಿರಾಕರಿಸಿದ್ದಾರೆ.
72 ಕಾನ್ಸ್ಟೆಬಲ್ಗಳು ಮತ್ತು 20 ಮುಖ್ಯ ಕಾನ್ಸ್ಟೆಬಲ್ಗಳನ್ನು ಅಮಾನತು ಮತ್ತು ವೇತನ ಕಡಿತ ಮಾಡಲಾಗಿದೆ ಎಂದು ವರದಿಯಾಗಿತ್ತು.
ನಕಲಿ ಸುದ್ದಿಗಳನ್ನು ವರದಿ ಮಾಡಿದ ಮಾದ್ಯಮದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಅಂಜನಿ ಕುಮಾರ್ ಹೇಳಿದ್ದಾರೆ. ಒಂದೇ ದಿನದಲ್ಲಿ 92 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ. ಇದು ತಪ್ಪು ಸುದ್ದಿ. ದಯವಿಟ್ಟು ಇದನ್ನು ನಂಬಬೇಡಿ. ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಈ ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಅಂಜನಿ ಕುಮಾರ್ ಬರೆದಿದ್ದಾರೆ.
ಹೈದರಾಬಾದ್ ಪೊಲೀಸರ ವಿರುದ್ಧ ರಾಜಕೀಯ ಪಕ್ಷಗಳು, ಮುಖ್ಯವಾಗಿ ಬಿಜೆಪಿ ಮತ್ತು ತೆಲಂಗಾಣ ಕಾಂಗ್ರೆಸ್ ಗಂಭೀರವಾದ ಆರೋಪಗಳನ್ನು ಮಾಡಿವೆ, ಇದು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು ಅಸದುದ್ದೀನ್ ಒವೈಸಿ ಅವರ ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್ ಪಕ್ಷದ ಕಾರ್ಯಕರ್ತರಿಗೆ ನಿಷ್ಟುರವಾಗಿದೆ ಎಂದು ಹೇಳಿದೆ.