ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದೇಕೆ? ಈ ಬಗ್ಗೆ ಸಿಎಂ ಬಿಎಸ್ ವೈ ಹೇಳಿದ್ದೇನು?

yadiyoorappa
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(28-11-2020): ತನ್ನ ರಾಜಕೀಯ ಕಾರ್ಯದರ್ಶಿ, ಬಹುಕಾಲದಿಂದ ಬಿಎಸ್ ವೈ ಜೊತೆಗಿದ್ದ ಸಂತೋಷ್ ದಿಢೀರ್ ಆತ್ಮಹತ್ಯೆಗೆ ಯತ್ನಿಸಿದಾಗ ಸಿಎಂ ಬಿಎಸ್ ವೈ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದಾರೆ.

ಬಳಿಕ ಮಾತನಾಡಿದ ಬಿಎಸ್ ವೈ, ಸಂತೋಷ್ ಬೆಳಿಗ್ಗೆಯಿಂದ ನಗುನಗುತ್ತಾ ಚೆನ್ನಾಗಿಯೇ ಇದ್ದ. ಯಾವುದೇ ಆತಂಕ ಇಲ್ಲ.

ಬೆಳಿಗ್ಗೆ ನನ್ನ ಜತೆ ಮುಕ್ಕಾಲು ಗಂಟೆ ವಾಕ್ ಮಾಡಿದ್ದ. ಅವನ ಪತ್ನಿ ಜತೆ ನಾನು ಮಾತನಾಡಿದ್ದೇನೆ. ಆಗಿರುವುದು ಏನು ಎಂದು ಬೆಳಿಗ್ಗೆ ಆತನಲ್ಲಿ ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಘಟನೆಯ ಬಗ್ಗೆ ಸಂತೋಷ್ ಪತ್ನಿ ಜಾಹ್ನವಿ ಪ್ರತಿಕ್ರಿಯಿಸಿದ್ದು, ಅವರಿಗೆ ಕೌಟುಂಬಿಕ ಸಮಸ್ಯೆಗಳಿಲ್ಲ. ಆದರೆ ಇತ್ತೀಚಿನ ಕೆಲ ರಾಜಕೀಯ ಬೆಳವಣಿಗೆಯಿಂದ ಅವರು ಬೇಸತ್ತಿದ್ದರು. ದಿನವಿಡೀ ಬೇಸರದಲ್ಲಿದ್ದರು. ಸಂಜೆ ಹೊರಗಡೆ ಹೋಗಿ 7 ಗಂಟೆಗೆ ಮನೆಗೆ ಬಂದಿದ್ದರು ಎಂದು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು