ಸಿಎಂ ಯಡಿಯೂರಪ್ಪ ಕುಟುಂಬದಲ್ಲೂ ವ್ಯಾಪಿಸಿದ ಕೋವಿಡ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ಕೋವಿಡ್ ಬಾಧಿತರಾಗಿ ಚಿಕಿತ್ಸೆಯಲ್ಲಿರುವಂತೆಯೇ ಅವರ ಕುಟುಂಬದಲ್ಲೂ ಕೋವಿಡ್ ಹರಡಿರುವ ಬಗ್ಗೆ ವರದಿಯಾಗಿದೆ.

ಮುಖ್ಯಮಂತ್ರಿಗಳ ಮಗಳು, ಮೊಮ್ಮಗಳು ಮತ್ತು ಆಕೆಯ ಪತಿಗೂ ಸೋಂಕು ತಗುಲಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ತಗುಲಿರುವುದು ಇದು ಎರಡನೇಯ ಬಾರಿ. ಮೊದಲನೆಯ ಬಾರಿ ತಗುಲಿದಾಗಲೂ ಅವರ ಮಗಳಿಗೆ ತಗುಲಿತ್ತು.

ಬಾರಿ ಮುಖ್ಯಮಂತ್ರಿಯ ಹಿರಿಯ ಮಗಳು ಪದ್ಮಾವತಿ, ಮೊಮ್ಮಗಳಾದ ಡಾ. ಸೌಂದರ್ಯ ಮತ್ತು ಆಕೆಯ ಪತಿ ಡಾ. ನಿರಂಜನ್ ಅವರಿಗೂ ಕೊರೋನಾ ಸೋಂಕು ತಗುಲಿದೆ. ಯಡಿಯೂರಪ್ಪ ಮತ್ತು ಕುಟುಂಬ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಒಂದೇ ವಾರ್ಡಿನಲ್ಲಿ ತಂಗಿದ್ದಾರೆ.

ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ತನಗೆ ಕೋವಿಡ್ ದೃಢವಾಗಿದೆಯೆಂದು ಟ್ವೀಟಿಸಿದ್ದಾರೆ. ರಾಜ್ಯದ ವಿವಿಧೆಡೆ ಉಪ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ನಾಯಕರು, ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ರಾಜಕಾರಣಿಗಳು ಮತ್ತು ಅವರ ಆಪ್ತ ವಲಯದಲ್ಲಿ ಕೋವಿಡ್ ವ್ಯಾಪಿಸುವ ಆತಂಕ ಉಂಟಾಗಿದೆ.

ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕೋವಿಡ್ ತೀವ್ರವಾಗಿ ಹರಡುತ್ತಿದ್ದರೂ ರಾಜಕೀಯ ನಾಯಕರು ಮತ್ತು ಸರಕಾರದ ನಿರ್ಲಕ್ಷ್ಯ ಮತ್ತು ವಿಫಲತೆಗೆ ವ್ಯಾಪಕ ಅಸಮಧಾನ ವ್ಯಕ್ತವಾಗುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು