ಭಾರೀ ಮಳೆಗೆ ತತ್ತರಿಸಿವೆ ಉತ್ತರ ಕರ್ನಾಟಕ; ಡಿಸಿಗಳ ಜೊತೆ ಸಿಎಂ ಸಭೆ

yadiyurappa
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೀದರ್(15/10/2020)‌: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದ್ದು,  ಬೀದರ್ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ 47 ಮನೆಗಳು ಭಾಗಶಃ ಕುಸಿದಿವೆ ಎಂದು ವರದಿಯಾಗಿದೆ.

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸ್ಥಿತಿಗತಿ ಕುರಿತು ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈಗಾಗಲೇ ಕಲಬುರಗಿಯಲ್ಲಿ ಎರಡು, ಯಾದಗಿರಿಯಲ್ಲಿ 2, ರಾಯಚೂರಿನಲ್ಲಿ 1 ಎನ್​ಡಿಆರ್​ಎಫ್​ ತಂಡ ಕಾರ್ಯನಿರ್ವಹಣೆ ಮಾಡುತ್ತಿದೆ. ಪ್ರವಾಹ ಹೆಚ್ಚಿರುವ ಕಲಬುರ್ಗಿ ಹಾಗೂ ಯಾದಗಿರಿಗೆ ಎರಡು ಹೆಚ್ಚುವರಿ ಎನ್​ಡಿಆರ್​ಎಫ್​​ ತಂಡವನ್ನು ಸರ್ಕಾರ ಕಳುಹಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್​, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ದಾಖಲೆ ಮಳೆಯಾಗಿದ್ದು, ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕದಳ ಕಾರ್ಯನಡೆಸಿದೆ.

ಔರಾದ್‌ ತಾಲ್ಲೂಕಿನ ನಾಗನಪಲ್ಲಿ ಸಮೀಪದ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಮಳೆಯ ಅಬ್ಬರಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ.

ಬಸವಕಲ್ಯಾಣ ತಾಲ್ಲೂಕಿನಲ್ಲಿ 29 ಮನೆಗಳು, ಔರಾದ್‌ನಲ್ಲಿ ನಾಲ್ಕು, ಚಿಟಗುಪ್ಪ ತಾಲ್ಲೂಕಿನಲ್ಲಿ ಆರು ಮನೆಗಳು, ಕಮಲನಗರ ತಾಲ್ಲೂಕಿನಲ್ಲಿ ಖತಗಾಂವ, ದಾಬಕಾ, ಗಂಗನಬೀಡದಲ್ಲಿ ತಲಾ ಒಂದು ಮನೆ ಸೇರಿ ಒಟ್ಟು ಹತ್ತು ಮನೆಗಳು ಕುಸಿದಿವೆ. ಬೀದರ್‌, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿಯ ಸಮೀಕ್ಷೆ ನಡೆಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು