ನವದೆಹಲಿ(28-02-2021): ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್ನಲ್ಲಿ ಪ್ರಕಟವಾದ ಕ್ಲಿನಿಕಲ್ ಅಧ್ಯಯನವು ಹೆಚ್ಚಿನ ಸಸ್ಯ ಪ್ರೋಟೀನ್ಗಳನ್ನು ಸೇವಿಸಿದ ಮಹಿಳೆಯರ ಹಠಾತ್ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ.
ಕಡಿಮೆ ಪ್ರಮಾಣದ ಸಸ್ಯ ಪ್ರೋಟೀನ್ಗಳನ್ನು ಸೇವಿಸುವ ಮಹಿಳೆಯರೊಂದಿಗೆ ಹೋಲಿಸಿದರೆ ಹಠಾತ್ ಸಾವು, ಹೃದಯ-ರಕ್ತನಾಳದ ಸೋಂಕು ಮತ್ತು ಬುದ್ಧಿಮಾಂದ್ಯತೆಗೆ ಸಂಬಂಧಿಸಿದ ಮರಣದ ಅಪಾಯಗಳನ್ನು ಹೆಚ್ಚು ಸಸ್ಯ ಪ್ರೋಟೀನ್ಗಳನ್ನು ತಿನ್ನುವ ಮಹಿಳೆಯರಲ್ಲಿ ಕಡಿಮೆ ಪ್ರಮಾಣದಲ್ಲಿ ಹೊಂದಿದೆ ಎಂದು ಕಂಡುಹಿಡಿದಿದೆ.
ಸಂಶೋಧಕರು ರಾಷ್ಟ್ರೀಯ ಮಹಿಳಾ ಆರೋಗ್ಯ ಉಪಕ್ರಮ ಅಧ್ಯಯನದಲ್ಲಿ ಭಾಗವಹಿಸಿದ 1,00,000 ಕ್ಕೂ ಹೆಚ್ಚು ಮಹಿಳೆಯರ (50 ರಿಂದ 79 ವಯಸ್ಸಿನ) ಡೇಟಾವನ್ನು ವಿಶ್ಲೇಷಿಸಿ ವರದಿಯನ್ನು ಸಿದ್ದಪಡಿಸಿದ್ದಾರೆ.
ಬೀಜಗಳು, ಬೀನ್ಸ್ ಮತ್ತು ಬಟಾಣಿಗಳಂತಹ ಸಸ್ಯ ಪ್ರೋಟೀನ್ಗಳನ್ನು ಎಷ್ಟು ಬಾರಿ ತಿನ್ನುತ್ತಿದ್ದರು ಎಂಬ ಬಗ್ಗೆ ಅಧ್ಯಯನದಲ್ಲಿ ಪ್ರಶ್ನೆಗಳನ್ನು ಉಲ್ಲೇಖಿಸಲಾಗಿತ್ತು. ಈ ಅವಧಿಯಲ್ಲಿ, ಒಟ್ಟು 25,976 ಸಾವುಗಳು ಸಂಭವಿಸಿವೆ. ಹೃದಯರಕ್ತನಾಳದ ಕಾಯಿಲೆಯಿಂದ 6,993 ಸಾವುಗಳು (ಕ್ಯಾನ್ಸರ್ ನಿಂದ) 7,516 ಸಾವುಗಳು ಮತ್ತು ಬುದ್ಧಿಮಾಂದ್ಯತೆಯಿಂದ 2,734 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಈ ಅಧ್ಯಯನವು ಸಸ್ಯ ಪ್ರೋಟಿನ್ ಗಳನ್ನು ಸೇವಿಸಿದ ಮಹಿಳೆಯರ ಕಡಿಮೆ ಸಾವಿನ ಬಗ್ಗೆ ವರದಿಯನ್ನು ನೀಡಿದೆ.