ಕಳೆದ 8 ತಿಂಗಳಿನಲ್ಲಿ ಎಷ್ಟು ಕ್ಲಿನಿಕ್ ಗಳು ಬಂದ್ ಆಗಿವೆ ಗೊತ್ತಾ?

clinic
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(18-10-2020): ಕಳೆದ 8 ತಿಂಗಳಿನಿಂದ 1,500ಕ್ಕೂ ಅಧಿಕ ಕ್ಲಿನಿಕ್ ಗಳು ಮುಚ್ಚಿಕೊಂಡಿವೆ ಎಂದು ಆರೋಗ್ಯ ಇಲಾಖೆ ಮಹತ್ವದ ಮಾಹಿತಿ ನೀಡಿದೆ.

ಕೊರೊನಾ ಕಾರಣದಿಂದ ವೈದ್ಯರು ಕ್ಲಿನಿಕ್ ಗಳಿಗೆ ತೆರಳಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದು, ಕ್ಲಿನಿಕ್ ಗಳಲ್ಲಿ ತೆರಳಿ ಚಿಕಿತ್ಸೆ ನೀಡುತ್ತಿರುವವರು ಬಹುತೇಕರು 50ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.

ಕೊರೊನಾಗೆ ಮೊದಲು ಬೆಂಗಳೂರಿನಲ್ಲಿ 7 ಸಾವಿರಕ್ಕೂ ಅಧಿಕ  ಸಣ್ಣ ಸಣ್ಣ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಸರ್ಕಾರವು ಲಾಕ್‌ಡೌನ್ ಘೋಷಿಸಿದ ಬಳಿಕ ಬಹುತೇಕ ಕ್ಲಿನಿಕ್‌ಗಳು ಬಂದ್ ಆಗಿವೆ. ಮೊದಲು ಸರಕಾರವೇ ಸಣ್ಣ ಕ್ಲಿನಿಕ್ ಗಳಲ್ಲಿ ಜ್ವರಕ್ಕೆ ಔಷಧಿ ಕೊಡಬಾರದೆಂದು ಸೂಚಿಸಿತ್ತು. ಬಳಿಕ ಲಾಕ್ ಡೌನ್ ತೆಗೆದು ಜನಸಂಚಾರ ಪ್ರಾರಂಭವಾದರೂ ವೈದ್ಯರು ಮಾತ್ರ ಕ್ಲಿನಿಕ್ ಗಳ ಬಾಗಿಲು ತೆರೆಯಲು ಮುಂದೆ ಬಂದಿಲ್ಲ.

ವೈದ್ಯರಿಗೆ ವ್ಯಾಪಕವಾಗಿ ಕೋವಿಡ್ ತಗುಲಿದ್ದು, 50ಕ್ಕೂ ಅಧಿಕ ವೈದ್ಯರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇನ್ನು ಶೇ 97.6ರಷ್ಟು ಮಂದಿಗೆ ಕೋವಿಡ್ ಲಕ್ಷಣಗಳು ಇಲ್ಲವಾಗಿತ್ತು. ಆದ್ದರಿಂದ ವೈದ್ಯರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ.

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು