ಒಬಾಮ ವಿರುದ್ಧ ಉತ್ತರ ಪ್ರದೇಶದಲ್ಲಿ ಕೇಸು ದಾಖಲು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(19-11-2020): ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಉತ್ತರ ಪ್ರದೇಶದಲ್ಲಿ ಸಿವಿಲ್ ಕೇಸು ದಾಖಲಾಗಿದೆ. ಒಬಾಮಾರ ಹೊಸ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಬಗ್ಗೆ ಅವಮಾನ ಮಾಡಲಾಗಿದೆ ಎಂದು ದೂರಲಾಗಿದೆ.

ಉತ್ತರ ಪ್ರದೇಶದ ವಕೀಲ ಪ್ರತಾಪ್ ಗಢದ ವಕೀಲ ಗ್ಯಾನ್ ಪ್ರಕಾಶ್ ಶುಕ್ಲ ಅವರೇ ಈ ದೂರು ಕೊಟ್ಟವರು. ಇವರು ಆಲ್ ಇಂಡಿಯಾ ರೂರಲ್ ಬಾರ್ ಅಸೋಸಿಯೇಷನ್ ಅದ್ಯಕ್ಷರೂ ಆಗಿದ್ದಾರೆ. ಲಾಲ್ ಗಂಜಿನ ಸಿವಿಲ್ ನ್ಯಾಯಾಲಯದಲ್ಲಿ ಈ ಕೇಸು ದಾಖಲಾಗಿರುವುದು.

ಎಫ್ಐಅರ್ ದಾಖಲು ಮಾಡದಿದ್ದರೆ ಅಮೇರಿಕಾದ ರಾಯಭಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿಯೂ ಅವರು ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಇಬ್ಬರನ್ನೂ ಅವಮಾನ ಮಾಡಲಾಗಿದೆ. ಇದು ದೇಶದ ಪರಮಾಧಿಕಾರದ ಮೇಲಿನ ದಾಳಿಯಾಗಿದೆ. ಅಲ್ಲದೇ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳನ್ನು ಘಾಸಿಗೊಳಿಸಲಾಗಿದೆಯೆಂದೂ ದೂರಿನಲ್ಲಿ ಹೇಳಲಾಗಿದೆ.

ರಾಹುಲ್ ಗಾಂಧಿ ಅವರಿಗೆ ತಮ್ಮ ಗುಣಾವಗುಣಗಳ ಬಗ್ಗೆ ಜ್ಞಾನವಿಲ್ಲ, ಮಾನಸಿಕ ಅಸ್ಥಿರತೆ ಹಾಗೂ ಒತ್ತಡದಲ್ಲಿ ಇರುತ್ತಾರೆ. ವಿದ್ಯಾರ್ಥಿಯೊಬ್ಬ ತನಗೆ ನೀಡಿದ ಮನೆ ಪಾಠ ಮುಗಿಸಿ ಶಿಕ್ಷಕರನ್ನು ಮೆಚ್ಚಿಸಲು ಯತ್ನಿಸುವಂತೆ ಕಂಡುಬರುತ್ತಾರೆ. ಅಧ್ಯಯನ ಮಾಡಬೇಕಿರುವ ವಿಚಾರದಲ್ಲಿ ಅವರಿಗೆ ಪ್ರಾವೀಣ್ಯತೆ ಸಾಧಿಸಲು ಉತ್ಸಾಹ ಹಾಗೂ ಯೋಗ್ಯತೆಯ ಕೊರತೆ ಇದೆ ಎಂದು ಬರಾಕ್ ಒಬಾಮಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಜೊತೆಗೆ ಮನಮೋಹನ್ ಸಿಂಗ್ ಬಗ್ಗೆಯೂ ಇದರಲ್ಲಿ ಪ್ರಸ್ತಾಪವಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು