ಮುಂಬೈ(24-10-2020): ಗುರುವಾರ ಸಂಜೆ ಮುಂಬೈನ ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ ಅನಾಹುತ ನಡೆದಿದ್ದು ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿಯನ್ನು ನಂದಿಸಲು ಇನ್ನೂ ಕಷ್ಟಪಡುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ, ಬೆಂಕಿಯನ್ನು ನಂದಿಸಲು ಇನ್ನೂ 12 ಗಂಟೆ ಅಥವಾ ಒಂದು ದಿನ ಬೇಕಾಗುತ್ತದೆ ಎಂದು ಹೇಳಲಾಗಿದೆ.
ಸಿಟಿ ಸೆಂಟರ್ ಮಾಲ್ನಲ್ಲಿ ಗುರುವಾರ ಸಣ್ಣ ಶಾರ್ಟ್ ಸರ್ಕ್ಯೂಟ್ ನಂತರ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ಅಗ್ನಿಶಾಮಕ ಕೇಂದ್ರಗಳ ಅಧಿಕಾರಿಗಳು ಮತ್ತು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತಿದೆ.
ಘಟನೆಯ ಸಮಯದಲ್ಲಿ, ಮಾಲ್ ಒಳಗೆ ಸುಮಾರು 300 ಜನರಿದ್ದರು, ಎಲ್ಲರನ್ನು ಅಗ್ನಿಶಾಮಕ ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ, ಬೆಂಕಿ ತುಂಬಾ ಪ್ರಬಲವಾಗಿತ್ತು ಮತ್ತು ಭಾರೀ ಹೊಗೆ ಬರುತ್ತಿತ್ತು, ಕೇಂದ್ರದ ಪಕ್ಕದ ಕಟ್ಟಡಗಳ ನಿವಾಸಿಗಳನ್ನು ಸಹ ಸ್ಥಳಾಂತರಿಸಲಾಯಿತು. 55 ಅಂತಸ್ತಿನ ಎತ್ತರದ ಕಟ್ಟಡದ ಸುಮಾರು 3,500 ನಿವಾಸಿಗಳನ್ನು ಕಟ್ಟಡದಿಂದ ಹೊರಗೆ ಕಳುಹಿಸಲಾಗಿದೆ. ಬೆಂಕಿ ನಂದಿಸುವ ಪ್ರಕ್ರಿಯೆ ಇನ್ನೂ ಕೂಡ ಮುಂದುವರಿದಿದೆ.