ನಾಳೆಯಿಂದ ತೆರೆಯಲಿವೆ ಚಿತ್ರ ಮಂದಿರಗಳು; ಸರಕಾರದಿಂದ ಮಾರ್ಗಸೂಚಿ ಪ್ರಕಟ

cinema
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(14/10/2020) ಕೊರೊನಾ ಸೋಂಕಿನಿಂದ ಇದುವರೆಗೆ ಮುಚ್ಚಲ್ಪಟ್ಟ ಚಿತ್ರಮಂದಿರಗಳು ಆರು ತಿಂಗಳ ಬಳಿಕ  ನಾಳೆಯಿಂದ ತೆರೆಯಲಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಚಿತ್ರಮಂದಿರಗಳು ಅರ್ಧ ಮಾತ್ರ ಭರ್ತಿ ಆಗಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ಚಿತ್ರಮಂದಿರ ತೆರೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. . ಈ ಮಾರ್ಗಸೂಚಿಗಳು ಚಿತ್ರಮಂದಿರಗಳು, ರಂಗಮಂದಿರಗಳು, ಮಲ್ಟಿ ಪ್ಲೆಕ್ಸ್​ಗಳಿಗೆ ಅನ್ವಯವಾಗುತ್ತವೆ.

ನಾಳೆಯಿಂದ ಚಿತ್ರಮಂದಿರ ಓಪನ್​ ಆದರೂ ಶುಕ್ರವಾರದಿಂದ ಚಿತ್ರಪ್ರದರ್ಶನ ಶುರು ಆಗಲಿದೆ. ಆದರೆ, ಥಿಯೇಟರ್ ತೆರೆಯಲು ಒಮ್ಮತ ಮೂಡದ ಕಾರಣ ರಾಜ್ಯಾದ್ಯಾಂತ ಅರ್ಧದಷ್ಟು ಚಿತ್ರಮಂದಿರಗಳು ಮಾತ್ರ ತೆರೆಯಲಿವೆ.

ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಡ್ಡಾಯ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಮಂದಿರದ ಒಳಗೆ ಉಗುಳುವುದು ನಿಷಿದ್ಧ, ಸಿನಿಮಾ ಹಾಲ್ ಒಳಗೆ ಆಹಾರ ಸೇವನೆ ನಿಷಿದ್ಧ, ವೀಕ್ಷಕರಿಗೆ ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯ, ಪ್ಯಾಕ್ ಆಗಿರುವ ಆಹಾರ, ಸ್ನ್ಯಾಕ್ಸ್ ಗಳ ಮಾರಾಟ, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ, ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಮಾತ್ರ ಮಂದಿರದ ಒಳಗೆ ಪ್ರವೇಶ, ಟಿಕೆಟ್​ಗೆ ಹಣಪಾವತಿಗೆ ಡಿಜಿಟಲ್ ಪೇಮೆಂಟ್​ಗೆ ಆದ್ಯತೆ
ಟಿಕೆಟ್ ವಿತರಿಸುವಾಗ ವೀಕ್ಷಕರ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು