ಚುನಾವಣೆ ಫಲಿತಾಂಶ ದಿನ ವಿಜಯೋತ್ಸವ ಮೆರವಣಿಗೆ ನಿಷೇಧ: ಚುನಾವಣಾ ಆಯೋಗ ಆದೇಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರವಾದ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ದಿನ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಯಾವುದೇ ರೀತಿಯ ವಿಜಯೋತ್ಸವ ಹಾಗೂ ಮೆರವಣಿಗೆಗಳನ್ನು ನಡೆಸಬಾರದು ಎಂದು ಚುನಾವಣೆ ಆಯೋಗ ಹೇಳಿದೆ.

ಪ್ರತಿದಿನ ದೇಶದಲ್ಲಿ 3ಲಕ್ಷಕ್ಕೂ ಅಧಿಕ ಕೋವಿಡ್‌ ಕೇಸ್ ಪತ್ತೆಯಾಗುತ್ತಿವೆ, ದೇಶದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಕಠಿಣ ರೂಲ್ಸ್ ಜಾರಿಯಲ್ಲಿವೆ, ಇಂಥ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಚುನಾವಣೆ ಫಲಿತಾಂಶದ ದಿನ ವಿಜಯೋತ್ಸವ ಹಾಗೂ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ಚುನಾವಣೆ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಪಂಚ್ ರಾಜ್ಯಗಳ ಚುನಾವಣೆಯ 7 ಹಂತಗಳ ಮತದಾನ ಮುಕ್ತಾಯವಾಗಿದ್ದು ಏಪ್ರಿಲ್‌ 29ರಂದು ನಡೆಯಲಿರುವ ಕೊನೆಯ ಹಂತದ ಮತದಾನ ಬಾಕಿ ಇದೆ. ಬರುವ ಭಾನುವಾರ (ಮೇ 2)ರಂದು ಮತ ಏಣಿಕೆ ನಡೆಯಲಿದೆ. ಆ ದಿನ ಯಾರೂ ಕೂಡ ವಿಜಯೋತ್ಸವ ಹಾಗೂ ಮೆರವಣಿಗೆ ನಡೆಸಬಾರದು ಎಂದು ಆಯೋಗ
ತಿಳಿಸಿದೆ.

ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗೂ ಇದು ಅನ್ವಯವಾಗಲಿದೆ, ಚುನಾವಣಾ ಸಮಿತಿಯು ಕೋವಿಡ್‌ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಪಕ್ಷಗಳ ನಾಯಕರು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಅನುಸರಿಸಬೇಕಾದ ಶಿಷ್ಟಾಚಾರಗಳನ್ನು ರೂಪಿಸಿತ್ತು. ಕೋವಿಡ್ ಎರಡನೇ ಅಲೆ ತೀವ್ರವಾಗಲು ಚುನಾವಣೆಗಳೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದ್ದವು, ಈಗ ಚುನಾವಣಾ ಆಯೋಗ ಎಚ್ಚೆತ್ತುಕೊಂಡು ಈ ಆದೇಶ ಹೊರಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು