ಪ್ರಸಿದ್ಧ ಪರಿಸರ ಹೋರಾಟಗಾರ, ಚಿಪ್ಕೋ ಚಳವಳಿಯ ಸುಂದರ್ ಲಾಲ್ ಬಹುಗುಣ ಕೋವಿಡ್ ಗೆ ಬಲಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಪ್ರಸಿದ್ಧ ಪರಿಸರ ಹೋರಾಟಗಾರ, ಚಿಪ್ಕೋ ಚಳವಳಿಯ ಸುಂದರ್ ಲಾಲ್ ಬಹುಗುಣ ಕೋವಿಡ್ ತಗುಲಿ ಮೃತಪಟ್ಟಿದ್ದಾರೆ. ಇವರಿಗೆ 94 ವರ್ಷ ವಯಸ್ಸಾಗಿತ್ತು.

ಮೇ ಎಂಟರಂದು ಕೋವಿಡ್ ಪಾಸಿಟಿವ್ ಆದ ಬಳಿಕ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆಯಿಂದ ಅವರ ದೇಹದಲ್ಲಿರುವ ಆಕ್ಸಿಜನ್ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು.

ಚಿಪ್ಕೋ ಚಳವಳಿಯ ಮುಂದಾಳುವಾಗಿದ್ದ ಬಹುಗುಣ 1970 ರಲ್ಲಿ ಮರ ಕಡಿಯುವುದರ ವಿರುದ್ಧ ಮರ ಗಳನ್ನು ಅಪ್ಪಿಕೊಳ್ಳುವ ಮೂಲಕ ವಿಶಿಷ್ಠ ಚಳವಳಿಗೆ ರೂಪು ಕೊಟ್ಟಿದ್ದರು. ಇವರೊಂದಿಗೆ ಗ್ರಾಮೀಣ ಜನರೂ ಕೈ ಜೋಡಿಸಿದ್ದರು.  ಇನ್ನಿತರ ಹಲವು ಚಳವಳಿಗಳನ್ನು ನಡೆಸಿ, ಜೈಲುವಾಸವನ್ನೂ ಕಂಡಿದ್ದರು.

ಇತ್ತೀಚೆಗೆ ಪ್ರಾರಂಭವಾದ ರೈತ ಚಳವಳಿಗೂ ತನ್ನ ಬೆಂಬಲ ಸೂಚಿಸಿದ್ದರು. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳೂ ಇವರನ್ನು ಅರಸಿ ಬಂದಿತ್ತಲ್ಲದೇ, ಹಲವು ಶಾಲಾ ಪಠ್ಯಪುಸ್ತಕಗಳಲ್ಲೂ ಇವರ ಬಗ್ಗೆ ಪಾಠಗಳಿದ್ದವು. ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು