ನವದೆಹಲಿ(13-10-2020): ರಾಷ್ಟ್ರೀಯ ಕಾಮಧೇನು ಆಯೋಗ (ಆರ್ಕೆಎ) ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಗೋವಿನ ಸೆಗಣಿಗಳಿಂದ ತಯಾರಿಸಿದ ‘ಚಿಪ್’ ಅನ್ನು ಅನಾವರಣಗೊಳಿಸಿದ್ದು, ಇದು ಮೊಬೈಲ್ ಹ್ಯಾಂಡ್ಸೆಟ್ಗಳಿಂದ ವಿಕಿರಣವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ವಿರುದ್ಧದ ರಕ್ಷಣೆಯಾಗಿದೆ ಎಂದು ಹೇಳಿದ್ದು, ನಿಜಕ್ಕೂ ಅಚ್ಚರಿ ಮೂಡಿಸಿದೆ.
ಹಸುವಿನ ಉತ್ಪನ್ನಗಳನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಪ್ರಾರಂಭಿಸಿದ ‘ಕಾಮಧೇನು ದೀಪಾವಳಿ ಅಭಿಯಾನ್’ ಉದ್ಘಾ ಟನೆಯಲ್ಲಿ ಮಾತನಾಡಿದ ವಲ್ಲಭಭಾಯ್ ಕಥಿರಿಯಾ “ಹಸು ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ, ಇದು ವಿಕಿರಣ ವಿರೋಧಿ, ಇದು ವೈಜ್ಞಾನಿಕವಾಗಿ ಸಾಬೀತಾಗಿದೆ, ಇದು ವಿಕಿರಣ ಚಿಪ್ ಆಗಿದ್ದು, ಇದನ್ನು ವಿಕಿರಣವನ್ನು ಕಡಿಮೆ ಮಾಡಲು ಮೊಬೈಲ್ ಫೋನ್ಗಳಲ್ಲಿ ಬಳಸಬಹುದು ಎಂದು ಹೇಳಿದ್ದಾರೆ.
ಗೌಸತ್ವ ಕವಾಚ್ ಹೆಸರಿನ ‘ಚಿಪ್’ ಅನ್ನು ರಾಜ್ಕೋಟ್ ಮೂಲದ ಶ್ರೀಜಿ ಗೋ ಶಾಲೆ ತಯಾರಿಸಿದ್ದಾರೆ. 2019 ರಲ್ಲಿ ಸ್ಥಾಪನೆಯಾದ ಆರ್ಕೆಎ ಹಸುಗಳ ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಮತ್ತು ಅವುಗಳ ಸಂತತಿಯನ್ನು ಗುರಿಯಾಗಿರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿಪ್ ತಯಾರಿಸಲಾಗಿದೆ.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುವ ಈ ಆಯೋಗ, ಹಬ್ಬದ ಸಮಯದಲ್ಲಿ ಹಸುವಿನ ಆಧಾರಿತ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.