ಚಿನ್ನಾಭರಣಗಳಿಗಿನ್ನು ಹಾಲ್ ಮಾರ್ಕ್ ಕಡ್ಡಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಮುದ್ರೆ ಬಳಸುವುದು ಕಡ್ಡಾಯವಾಗಲಿದೆ. ಜೂನ್ ಒಂದರಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ (ಬಿಐಎಸ್‌) ನಲ್ಲಿ ಚಿನ್ನದ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಳ್ಳುವ ಉದ್ಧೇಶದಿಂದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲಾವಕಾಶ ನೀಡಿತ್ತು. ಇನ್ನೊಮ್ಮೆ ಕಾಲಾವಕಾಶ ವಿಸ್ತರಣೆ ಮಾಡುವ ಪ್ರಶ್ನೆಯೇ ಇಲ್ಲ. ಜೂನ್ ಒಂದು ಅಂತಿಮ ಗಡುವು ಎಂದು ಕೇಂದ್ರವು ಸ್ಪಷ್ಠಪಡಿಸಿದೆ.

ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು 2019 ನವೆಂಬರ್‌ನಲ್ಲಿ ಘೋಷಿಸಲಾಗಿತ್ತು. ಬಹಳಷ್ಟು ಕಾಲಾವಕಾಶ ನೀಡಿ, 2020 ಜನವರಿ ಹದಿನೈದರಂದು ಜಾರಿಗೊಳಿಸುವ ಯೋಜನೆ ರೂಪಿಸಿತ್ತು. ಆದರೆ ವರ್ತಕರ ವಿನಂತಿಯ ಮೇರೆಗೆ ಅದನ್ನು ಇನ್ನಷ್ಟು ಮುಂದೂಡುತ್ತಾ ಬರಲಾಗಿತ್ತು.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಇದರ 2016 ವರದಿಯಂತೆ ಭಾರತದಲ್ಲಿ ನಾಲ್ಕು ಲಕ್ಷದಷ್ಟು ಆಭರಣ ಮಳಿಗೆಗಳಿತ್ತು. ಆದರೆ ಅದರಲ್ಲಿ 50,000 ಮಾತ್ರವೇ ನೋದಾಯಿತಗೊಂಡವುಗಳು.

ದೇಶದಲ್ಲಿ ಮಾರಲಾಗುವ ಆಭರಣಗಳಲ್ಲಿ ನಲ್ವತ್ತು ಶೇಕಡಾ ಮಾತ್ರವೇ ಹಾಲ್ ಮಾರ್ಕ್ ಇರುವಂತಹುದು. ಉಳಿದ ಅರುವತ್ತು ಶೇಕಡಾ ಆಭರಣಗಳು ಅದರ ಗುಣಮಟ್ಟದ ಪರೀಕ್ಷೆ ನಡೆಸದೇ ಮಾರಲಾಗುತ್ತಿದೆ ಎಂದು ಕಳೆದ ವರ್ಷದ ಪಿಟಿಐ ವರದಿಯಲ್ಲಿ ಹೇಳಲಾಗಿದೆ.

ದೇಶದ 234 ಜಿಲ್ಲೆಗಳಲ್ಲಿ 892 ಹಾಲ್ ಮಾರ್ಕ್ ಕೇಂದ್ರಗಳಿವೆ. ಹೊಸ ನಿಯಮ ಜಾರಿಗೆ ಬರುವುದರಿಂದ ಕಾನೂನುಬದ್ಧವಾಗಿ ವ್ಯವಹರಿಸುವ ಉದ್ಯಮಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಅದೇ ವೇಳೆ ಕ್ರಮಬದ್ಧವಾಗಿ ವ್ಯವಹರಿಸದ ಉದ್ಯಮಗಳು ಇದಕ್ಕಾಗಿ ಸಿದ್ಧವಾಗಬೇಕಿದೆ ಎಂದು ಆಭರಣ ಮಾರಾಟ ಕ್ಷೇತ್ರದ ತಜ್ಞರು ಹೇಳುತ್ತಾರೆ.

ಹೊಸ ನಿಯಮವು ಗ್ರಾಹಕರಿಗೆ ಶುಭ ಸುದ್ದಿಯಾಗಿದೆ. ಬೆಲೆಬಾಳುವ ಆಭರಣಗಳನ್ನು ಖರೀದಿಸುವಾಗ ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ಖರೀದಿಸಬಹುದಾಗಿದೆ. ಅದರಲ್ಲೂ ಹಳ್ಳಿಯ ಕಡೆಗಳಲ್ಲಿ ಉದ್ಯಮಿಗಳಿಂದ ಆಗಬಹುದಾದ ವಂಚನೆಗಳಿಂದ ಪಾರಾಗಬಹುದಾಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ದೇಶಾದ್ಯಂತ ವರ್ಷದ ಜೂನ್ ಒಂದರಿಂದ ಹಾಲ್ ಮಾರ್ಕ್ ಇಲ್ಲದ ಆಭರಣಗಳನ್ನು ಮಾರಲಾಗುವುದಿಲ್ಲ. ಬೆಲೆಬಾಳುವ ಲೋಹಗಳಾದ ಚಿನ್ನ, ಬೆಳ್ಳಿ, ಪ್ಲಾಟಿನಮ್ ಇತ್ಯಾದಿಗಳಿಗೆ ಇದು ಅನ್ವಯವಾಗಲಿದೆ. ಜುಲೈ ತಿಂಗಳು ಆಭರಣ ಮಳಿಗೆ ಮಾಲಕರು ತಮ್ಮ ಮಳಿಗೆಯನ್ನು ಬಿಐಎಸ್ ನಲ್ಲಿ ನೋಂದಾವಣೆ ಮಾಡಬೇಕಾಗಿರುವ ಅಂತಿಮ ಗಡುವು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು