ಸರಕಾರವನ್ನು ಟೀಕಿಸಿದ ಬಳಿಕ ಬಿಲಿಯನೇರ್ ನಾಪತ್ತೆ

Jack Ma
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೀನಾ(04-01-2020): ಚೀನಾದ ಶ್ರೀಮಂತ ಜನರಲ್ಲಿ ಒಬ್ಬರಾದ ಬಿಲಿಯನೇರ್ ಜ್ಯಾಕ್ ಮಾ ಚೀನಾ ಸರಕಾರವನ್ನು ಟೀಕಿಸಿದ ಬಳಿಕ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ.

ಚೀನಾದ ಅತಿದೊಡ್ಡ ಆನ್‌ಲೈನ್ ಕಂಪನಿಯಾದ ಅಲಿಬಾಬಾ ಗ್ರೂಪ್‌ನ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷರು ಕಳೆದ ಎರಡು ತಿಂಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಿಲ್ಲ. ಇದು ಅವರು ಕಾಣೆಯಾಗಿರಬಹುದೆಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ ಆಫ್ರಿಕಾದ ಬಿಸಿನೆಸ್ ಹೀರೋಸ್‌ನ ಅಂತಿಮ ಘಟ್ಟಕ್ಕೆ ಹಾಜರಾಗದೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ಜ್ಯಾಕ್ ಮಾ ಕಾರ್ಯಕ್ರಮದ ಜಡ್ಜ್ ಆಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ, ಜಡ್ಜ್ ಆಗಿ ಮತ್ತೊಬ್ಬ ಹಿರಿಯ ಅಲಿಬಾಬಾ ಕಾರ್ಯನಿರ್ವಾಹಕರನ್ನು ನೇಮಿಸಲಾಯಿತು. ಇವೆಲ್ಲವೂ ನವೆಂಬರ್‌ನಲ್ಲಿ ನಡೆದವು ಎಂದು ಯುನೈಟೆಡ್ ಕಿಂಗ್‌ಡಂನ ಟೆಲಿಗ್ರಾಫ್ ವರದಿ ಮಾಡಿದೆ.

ಆಶ್ಚರ್ಯಕರ ಸಂಗತಿಯೆಂದರೆ, ಕಂಪನಿಯ ಸಂಸ್ಥಾಪಕ ಜ್ಯಾಕ್ ಮಾ ಅವರ ಫೋಟೋವನ್ನು ಸಹ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಅಲಿಬಾಬಾ ವಕ್ತಾರರು ವೇಳಾಪಟ್ಟಿ ಸಮಸ್ಯೆಯಿಂದಾಗಿ ಜ್ಯಾಕ್ ಮಾ ತೀರ್ಪು ಸಮಿತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು