ಚೀನಾ(15-10-2020):ಯುದ್ಧಕ್ಕೆ ಸಿದ್ಧವಾಗುವಂತೆ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ತಮ್ಮ ಸೈನಿಕರಿಗೆ ಕರೆ ನೀಡಿದ್ದಾರೆ. ಚೀನಾದ ಗುವಾಂಗ್ ಡೊಂಗಿನ ಸೈನಿಕ ನೆಲೆಗೆ ಭೇಟಿ ನೀಡಿದ ಅವರು, ಸೈನಿಕರುನ್ನುದ್ಧೇಶಿಸಿ ಮಾತನಾಡುತ್ತಾ ಈ ಸೂಚನೆ ನೀಡಿದ್ದಾರೆ.
ದೇಶಕ್ಕೆ ಸಂಪೂರ್ಣ ಸಮರ್ಪಣೆಯಾಗಬೇಕು. ಎಲ್ಲಾ ಸೈನಿಕರೂ ತಮ್ಮ ಮನಸ್ಸು, ಶಕ್ತಿ ಸಾಮರ್ಥ್ಯಗಳನ್ನು ಪ್ರತಿ ನಿಮಿಷವೂ ಯುದ್ಧಕ್ಕಾಗಿ ಸಿದ್ಧಗೊಳಿಸಬೇಕು. ಸದಾ ಜಾಗೃತಿಯಲ್ಲಿರಬೇಕು ಎಂದು ಜಿನ್ಪಿಂಗ್ ಹೇಳಿದರು. ಯುದ್ಧಕ್ಕೆ ಪೂರ್ವಭಾವಿಯಾಗಿ ಈ ಹೇಳಿಕೆ ನೀಡಿದ್ದಾರೋ ಅಥವಾ ಸೈನಿಕರಿಗೆ ಆತ್ಮವಿಶ್ವಾಸ ತುಂಬಲು ಹೇಳಿದ್ದಾರೋ ಎನ್ನುವುದು ಸ್ಪಷ್ಟವಾಗಿಲ್ಲ.
ಬಲಿಷ್ಠ ಸೈನ್ಯವನ್ನು ಹೊಂದಿರುವ ಚೀನಾವು ಏಕಕಾಲದಲ್ಲಿ ಹಲವಾರು ದೇಶಗಳ ಜೊತೆಗೆ ಸಂಘರ್ಷದಲ್ಲಿದ್ದು, ಈ ಹೇಳಿಕೆಯು ಯಾರ ವಿರುದ್ಧವಾಗಿರಬಹುದು? ಚೀನಾದ ಮುಂದಿನ ನಡೆಯೇನು ಎಂದು ಜಗತ್ತು ಆತಂಕದಿಂದ ನೋಡುತ್ತಿದೆ.
ಅಮೇರಿಕಾ, ಭಾರತ, ಜಪಾನ್ ಮತ್ತಿತರ ದೇಶಗಳು ಮತ್ತು ಚೀನಾ ದೇಶದ ನಡುವೆ ಗಡಿ, ವ್ಯಾಪಾರ, ಸೈನಿಕ ಇತ್ಯಾದಿ ವಿವಾದಗಳು ಇಂದಿಗೂ ಜೀವಂತವಾಗಿದೆ. ಅದೇ ವೇಳೆ ವಿವಾದಗಳನ್ನು ಕೊನೆಗೊಳಿಸಲು ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸುತ್ತಲಿದೆ.