ವಿಶ್ವಕ್ಕೆ ಕೊರೊನಾ ಆಘಾತ ನೀಡಿದ್ದ ಚೀನಾದಿಂದ ಮತ್ತೊಂದು ವೈರಸ್ ವೈರಲ್!

china virus
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೀಜಿಂಗ್(07-11-2020): ಚೀನಾದಲ್ಲಿ ಸಾವಿರಾರು ಮಂದಿ ಬ್ರೂಸಲೋಸಿಸ್ ರೋಗದಿಂದ ಬಳಲುತ್ತಿದ್ದು, ಕೊರೊನಾ ಬೆನ್ನಲ್ಲೇ ಮತ್ತೊಂದು ಆಘಾತ ಚೀನಾದಿಂದ ಇಡೀ ವಿಶ್ವಕ್ಕೆ ಎದುರಾಗಿದೆ.

ಚೀನಾದ ಗನ್ನು ಪ್ರಾಂತ್ಯದ ರಾಜಧಾನಿ ಲನ್ ಜೌ ನಗರದಲ್ಲಿ 6000ಕ್ಕೂ ಅಧಿಕ ಮಂದಿಗೆ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದೆ. ಈ ರೋಗ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ. ಮೇಕೆ, ಹಸು, ನಾಯಿ, ಹಂದಿ, ಕುರಿಗಳ ಸಂಪರ್ಕದಿಂದ ಚೀನಾದಲ್ಲಿ ಮನುಷ್ಯನಿಗೆ ತಗುಲಿದೆ ಎನ್ನಲಾಗಿದೆ. ಹಾಲಿನ ಮೂಲಕವು ಮನುಷ್ಯನಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರೋಗ್ಯ ಆಯೋಗದ ಪ್ರಕಾರ ಲಸಿಕೆ ಕಾರ್ಖಾನೆಯಲ್ಲಿ ವೈರಸ್ ಸೋರಿಕೆ ಆಗಿದೆ. ಕಳೆದ ವರ್ಷವೇ ಈ ರೋಗ ಲಕ್ಷಣವಿದ್ದ ಅನೇಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಇದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು